ಮಕ್ಕಳನ್ನು ಮನೆಗೆ ಸಾಗಿಸುತ್ತಿದ್ದ ಶಾಲಾ ಬಸ್‌ವೊಂದು ಕಂದಕಕ್ಕೆ ಉರುಳಿಬಿದ್ದ ಪರಿಣಾಮ 27 ಮಕ್ಕಳು ಸೇರಿದಂತೆ 30 ಮಂದಿ ಸಾವನ್ನಪ್ಪಿರುವ ಘಟನೆ ಹಿಮಾಚಲ ಪ್ರದೇಶದ ಕಂಗ್ರಾ ಜಿಲ್ಲೆಯಲ್ಲಿ ಸೋಮವಾರ ನಡೆದಿದೆ.

ಶಿಮ್ಲಾ: ಮಕ್ಕಳನ್ನು ಮನೆಗೆ ಸಾಗಿಸುತ್ತಿದ್ದ ಶಾಲಾ ಬಸ್‌ವೊಂದು ಕಂದಕಕ್ಕೆ ಉರುಳಿಬಿದ್ದ ಪರಿಣಾಮ 27 ಮಕ್ಕಳು ಸೇರಿದಂತೆ 30 ಮಂದಿ ಸಾವನ್ನಪ್ಪಿರುವ ಘಟನೆ ಹಿಮಾಚಲ ಪ್ರದೇಶದ ಕಂಗ್ರಾ ಜಿಲ್ಲೆಯಲ್ಲಿ ಸೋಮವಾರ ನಡೆದಿದೆ. ಶಾಲಾ ವಾಹನ ನುರ್ಪುರ್‌- ಚಂಬಾ ಹೆದ್ದಾರಿಯಲ್ಲಿ ಹೋಗುತ್ತಿದ್ದಾಗ ಗುರ್ಚಲ್‌ ಗ್ರಾಮದ ಸಮೀಪ ಈ ಘಟನೆ ನಡೆದಿದೆ.

ಚಾಲಕ ನಿಯಂತ್ರಣ ತಪ್ಪಿದ್ದರಿಂದ ಬಸ್‌ 100 ಅಡಿ ಆಳದ ಕಂದಕ್ಕೆ ಉರುಳಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಸಾವನ್ನಪ್ಪಿದ ಮಕ್ಕಳು ರಾಮ್‌ ಸಿಂಗ್‌ ಪಥಾನಿಯ ಮೆಮೋರಿಯಲ್‌ ಸ್ಕೂಲ್‌ಗೆ ಸೇರಿದವರಾಗಿದ್ದಾರೆ. ಬಸ್‌ ಚಾಲಕ ಮದನ್‌ ಲಾಲ್‌ ಮತ್ತು ಇಬ್ಬರು ಮಹಿಳಾ ಶಿಕ್ಷಕರು ಕೂಡ ಘಟನೆಯಲ್ಲಿ ಸಾವನ್ನಪ್ಪಿದ್ದಾರೆ. ಈ ವಿದ್ಯಾರ್ಥಿಗಳು 5ನೇ ತರಗತಿಯಲ್ಲಿ ಓದುತ್ತಿದ್ದು, 10 ವರ್ಷದ ಒಳಗಿನವರಾಗಿದ್ದಾರೆ.

ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈರಾಮ್‌ ಠಾಕೂರ್‌ ಸಂತ್ರಸ್ತರ ಕುಟುಂಬಕ್ಕೆ 5 ಲಕ್ಷ ರು. ಪರಿಹಾರ ಘೊಷಿಸಿದ್ದಾರೆ.