ಮುಂಬೈ[ಅ.11]: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೂ ಮುನ್ನ ಬಿಜೆಪಿಯ ಮಿತ್ರ ಪಕ್ಷ ಶಿವಸೇನೆಗೆ ಭಾರೀ ಆಘಾತ ಉಂಟಾಗಿದೆ. ಕಲ್ಯಾಣ್‌ ಪೂರ್ವ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸ್ಪರ್ಧೆಗೆ ಶಿವಸೇನೆ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದಾರೆ.

ಪಕ್ಷದ ಈ ತೀರ್ಮಾನದ ವಿರುದ್ಧ 26 ಕಾರ್ಪೋರೇಟರ್ಸ್ಸ್, 300ಕ್ಕೂ ಅಧಿಕ ಕಾರ್ಯಕರ್ತರು ರಾಜೀನಾಮೆ ನೀಡಿ ಪಕ್ಷದ ಅಧ್ಯಕ್ಷ ಉದ್ಧವ್‌ ಠಾಕ್ರೆಗೆ ರಾಜೀನಾಮೆ ಪತ್ರವನ್ನು ರವಾನಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

100ಕ್ಕೂ ಹೆಚ್ಚು ಎನ್‌ಕೌಂಟರ್‌ ಖ್ಯಾತಿಯ ಶರ್ಮಾ ಶಿವಸೇನೆ ಅಭ್ಯರ್ಥಿ?

ಕಲ್ಯಾಣ್‌ ಪೂರ್ವ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬದಲಾಗಿ ಶಿವಸೇನೆಯ ಧನಂಜಯ್‌ ಬೊದಾರೆ ಅವರ ಸ್ಪರ್ಧೆಗೆ ಕಾರ್ಯಕರ್ತರು ಒತ್ತಾಯಿಸಿದ್ದಾರೆ. ಧನಂಜಯ್‌ ಅವರನ್ನು ಬೆಂಬಲಿಸಿರುವ 26 ಕಾರ್ಪೋರೇಟರ್‌ಗಳಲ್ಲಿ ಕಲ್ಯಾಣ್‌ ದೊಂಬಿವಾಲಿ ಮಹಾನಗರ ಪಾಲಿಕೆಯ 16 ಜನರು ಇದ್ದಾರೆ. ಈ ವಿದ್ಯಮಾನದಿಂದ ಶಿವಸೇನೆಗೆ ಚುನಾವಣೆಯಲ್ಲಿ ಹಿನ್ನಡೆ ಉಂಟಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಮಹಾರಾಷ್ಟ್ರದ 288 ವಿಧಾನಸಭೆ ಕ್ಷೇತ್ರಗಳಲ್ಲಿ ಬಿಜೆಪಿ 150, ಶಿವಸೇನೆ 124 ಮತ್ತು ಇತರೆ ಪಕ್ಷಗಳು 14 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿವೆ.

ಶಿವಸೇನೆಯವರೇ ಮುಂದಿನ ಸಿಎಂ: ಬಿಜೆಪಿಗೆ ಸೇನೆ ಟಾಂಗ್