ಶಿವಸೇನೆಯವರೇ ಮುಂದಿನ ಸಿಎಂ| ಬಿಜೆಪಿಗೆ ಸೇನೆ ಟಾಂಗ್| ಶಿವಸೇನೆಯ ಮುಖವಾಣಿ ಸಾಮ್ನಾ ಪತ್ರಿಕೆ ತನ್ನ ಸಂಪಾದಕೀಯದಲ್ಲಿ ಸಿಎಂ ಮಾತು!

ಮುಂಬೈ[ಜೂ.20]: ‘ಮಹಾರಾಷ್ಟ್ರದ ಮುಂದಿನ ಮುಖ್ಯ ಮಂತ್ರಿ ಶಿವಸೇನೆ ಅಭ್ಯರ್ಥಿ’ ಎಂದು ಶಿವಸೇನೆಯ ಮುಖವಾಣಿ ಸಾಮ್ನಾ ಪತ್ರಿಕೆ ತನ್ನ ಸಂಪಾದಕೀಯದಲ್ಲಿ ಬರೆದುಕೊಂಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಿಜೆಪಿ ಜೊತೆ ಮೈತ್ರಿ ವೇಳೆಯೇ ಇದು ನಿರ್ಧಾರವಾಗಿದೆ. ಶಿವಸೇನೆಯ ಆಡಳಿತದ ವೈಖರಿಯೇ ಭಿನ್ನ ಎಂದು ಪ್ರಕಟಿಸಿದೆ. ಈ ಮೂಲಕ ಬಿಜೆಪಿ ಜೊತೆ ಸಿಎಂ ಹುದ್ದೆ ಸಂಬಂಧ ನೇರಾನೇರ ಹೋರಾಟಕ್ಕೆ ಇಳಿದಿದೆ.

ಕೆಲ ದಿನಗಳ ಹಿಂದಷ್ಟೇ ಬಿಜೆಪಿ ನಾಯಕರು, ಮುಂದಿನ ಸಿಎಂ ನಮ್ಮ ಪಕ್ಷ ದಿಂದಲೇ ಆಗಲಿದ್ದಾರೆ ಎಂದಿದ್ದರು. ಇದೇ ವರ್ಷಾಂತ್ಯಕ್ಕೆ ಮಹಾರಾಷ್ಟ್ರ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಬಿಜೆಪಿ - ಶಿವಸೇನೆ ಮೈತ್ರಿ ಮಾಡಿಕೊಂಡಿವೆ.