ಮೊಟ್ಟೆ ರೇಟು ಜಾಸ್ತಿಯಾದ ಮೇಲೆ ಜನ ಆಮ್ಲೆಟ್ ತಿನ್ನೋದು ಕಡಿಮೆ ಮಾಡಿದ್ದಾರೆ ಎಂದು ಸುದ್ದಿಯಾಗಿತ್ತು. ಅಂಥದ್ದರಲ್ಲೇ ಮೊಟ್ಟೆ ಕದ್ದ ಇಬ್ಬರಿಗೆ ತಲಾ 25 ವರ್ಷ ಜೈಲು ಶಿಕ್ಷೆ ವಿಧಿಸಿದ ಸುದ್ದಿಯೊಂದು ಬಂದಿದೆ.

ತಾಂಜೇನಿಯಾ (ಡಿ.11): ಮೊಟ್ಟೆ ರೇಟು ಜಾಸ್ತಿಯಾದ ಮೇಲೆ ಜನ ಆಮ್ಲೆಟ್ ತಿನ್ನೋದು ಕಡಿಮೆ ಮಾಡಿದ್ದಾರೆ ಎಂದು ಸುದ್ದಿಯಾಗಿತ್ತು. ಅಂಥದ್ದರಲ್ಲೇ ಮೊಟ್ಟೆ ಕದ್ದ ಇಬ್ಬರಿಗೆ ತಲಾ 25 ವರ್ಷ ಜೈಲು ಶಿಕ್ಷೆ ವಿಧಿಸಿದ ಸುದ್ದಿಯೊಂದು ಬಂದಿದೆ.

Add Asianetnews Kannada as a Preferred SourcegooglePreferred

ಈ ಸುದ್ದಿ ಬಂದಿರೋದು ದೂರದ ತಾಂಜೇನಿಯಾದಿಂದ. ಜೊತೆಗೆ ಕಳವಾಗಿದ್ದು ಕೋಳಿ ಮೊಟ್ಟೆಯೂ ಅಲ್ಲ. ಕಳವಾಗಿದ್ದು ಉಷ್ಟ್ರಪಕ್ಷಿಯ ಮೊಟ್ಟೆ. ತಾಂಜೇನಿಯಾದಲ್ಲಿ ಉಷ್ಟ್ರಪಕ್ಷಿಗಳ ಮೊಟ್ಟೆಗಳ ಮಾರಾಟ ಶಿಕ್ಷಾರ್ಹ ಅಪರಾಧ.

ಹಾಗಾಗಿ, ಉಷ್ಟ್ರಪಕ್ಷಿಯ 16 ಮೊಟ್ಟೆಗಳೊಂದಿಗೆ ಪೊಲೀಸರ ಬಲೆಗೆ ಬಿದ್ದ ತಪ್ಪಿತಸ್ಥರಾದ ಮಾಟಿಕೊ ಮಾರ್ವ(32) ಮತ್ತು ಜೂಲಿಯಸ್ ಮಾರ್ವ(42) ಗೆ ಕಠಿಣ ಶಿಕ್ಷೆ ವಿಧಿಸಲಾಗಿದೆ. ಏಡ್ಸ್ ಗುಣಮುಖಪಡಿಸ ಬಹುದಾದ ಸಾಮರ್ಥ್ಯವಾಗಿ ಪರಿವರ್ತಿಸುವ ಮೊಟ್ಟೆಗಳನ್ನು ಕೀನ್ಯಾಗೆ ಮಾರಾಟ ಮಾಡಲು ಯತ್ನಿಸಿದ್ದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದರು.