ಇರಾಕ್[ಫೆ.17] ಈ ಮಹಾತಾಯಿ 6 ಹೆಣ್ಣು ಮತ್ತು ಒಂದು ಗಂಡು ಮಗುವಿಗೆ ಏಕಕಾಲದಲ್ಲಿ ಜನ್ಮ ನೀಡಿದ್ದಾಳೆ. ಇರಾಕಿನ ದಿಯಾಲಿ ಪ್ರೋವಿನೆನ್ಸ್ ಆಸ್ಪತ್ರೆಯಲ್ಲಿ 7 ಮಕ್ಕಳ ಜನನವಾಗಿದೆ.

ತಾಯಿ ಮತ್ತು ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಇದು ನ್ಯಾಚುರಲ್ ಬರ್ತ್ ಆಗಿದ್ದು 25 ವರ್ಷದ ತಾಯಿ ಆರೋಗ್ಯದಿಂದ ಇದ್ದಾಳೆ ಎಂದು ಆರೋಗ್ಯ ಇಲಾಖೆ ವಕ್ತಾರ ಫಿರಿಯಾಸ್ ಅಲ್ ಇಜಾಯಿ ಮಾಹಿತಿ ನೀಡಿದ್ದಾರೆ.

ಭ್ರೂಣ ಹೊರತೆಗೆದು ಮತ್ತೆ ತಾಯಿಯ ಹೊಟ್ಟೆಯೊಳಗಿಟ್ಟ ವೈದ್ಯರು!

ನಮಗೆ ಕುಟುಂಬ ವಿಸ್ತಾರ ಮಾಡುವ ಆಲೋಚನೆ ಇರಲೇ ಇಲ್ಲ. ಆದರೆ ಈಗ 10 ಮಕ್ಕಳನ್ನು ಅನಿವಾರ್ಯವಾಗಿ ನೋಡಿಕೊಳ್ಳಬೇಕಿದೆ ಎಂದು ಮಕ್ಕಳ ತಂದೆ ಯೂಸುಫ್ ಫಾದಲ್ ಹೇಳಿದ್ದಾರೆ. ಭಾರತದಲ್ಲಿಯೂ ಹಿಂದೆ ಒಬ್ಬ ತಾಯಿ 6  ಮಕ್ಕಳಿಗೆ ಜನ್ಮ ನೀಡಿದ್ದು ಸುದ್ದಿಯಾಗಿತ್ತು.