ಬೆಂಗಳೂರು(ಡಿ.01): ಗಡಿಯಲ್ಲಿ ಹೋರಾಡಿ, ಉಗ್ರರ ಗುಂಡಿಗೆ ಎದೆಯೊಡ್ಡಿ ವೀರಮರಣವನ್ನಪ್ಪಿದ ಬೆಂಗಳೂರಿನ ಹುತಾತ್ಮ ಯೋಧ ಅಕ್ಷಯ್​ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ 25 ಲಕ್ಷ ರೂ. ಪರಿಹಾರ ಘೋಷಿಸಲಾಗಿದೆ. ಯೋಧನ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಬಳಿಕ ಮಾತನಾಡಿದ ಸಚಿವ ಟಿ.ಬಿ.ಜಯಚಂದ್ರ ಪರಿಹಾರ ಘೋಷಣೆ ಮಾಡಿದರು.

ಇದೇವೇಳೆ, ಮಾತನಾಡಿದ ಮೇಯರ್ ಪದ್ಮಾವತಿ, ಬಿಬಿಎಂಪಿ ವತಿಯಿಂದ ಅಕ್ಷಯ್ ಪುತ್ರಿಯ ಹೆಸರಲ್ಲಿ  ೧೦ ಲಕ್ಷ ರೂ  ಎಪ್ ಡಿ. ಇಡಲಾಗುವುದು ಎಂದು ತಿಳಿಸಿದ್ದಾರೆ.