ಆಂಧ್ರದ ವಿಜಯನಗರಂ ಜಿಲ್ಲೆಯ ಕೊನೆರು ರೈಲ್ವೆ ನಿಲ್ದಾಣದ ಬಳಿ ರಾತ್ರಿ 11.30ರ ವೇಳೆಗೆ ಜಗದಲ್ ಪುರದಿಂದ ಭುವನೇಶ್ವರ್ ಕಡೆಗೆ ತೆರಳುತ್ತಿದ್ದ ಹಿರಾಖಂಡ್ ಎಕ್ಸ್ ಪ್ರೆಸ್ ರೈಲಿನ 8 ಬೋಗಿಗಳು ಹಳಿ ತಪ್ಪಿ ಈ ದುರಂತ ಸಂಭವಿಸಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಗಾಯಗೊಂಡವರನ್ನು ರಾಯಘಡ, ಪಾರ್ವತಿಪುರಂ ಹಾಗೂ ವಿಶಾಖಪಟ್ಟಣಂ ಆಸ್ಪತ್ರೆಗಳಿಗೆ ದಾಖಲಿಸಿದ್ದಾರೆ.
ಆಂಧ್ರ ಪ್ರದೇಶದಲ್ಲಿ ಭೀಕರ ರೈಲು ಅಪಘಾತ ಸಂಭವಿಸಿ 35 ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದು, ನೂರಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಆಂಧ್ರದ ವಿಜಯನಗರಂ ಜಿಲ್ಲೆಯ ಕೊನೆರು ರೈಲ್ವೆ ನಿಲ್ದಾಣದ ಬಳಿ ರಾತ್ರಿ 11.30ರ ವೇಳೆಗೆ ಜಗದಲ್ ಪುರದಿಂದ ಭುವನೇಶ್ವರ್ ಕಡೆಗೆ ತೆರಳುತ್ತಿದ್ದ ಹಿರಾಖಂಡ್ ಎಕ್ಸ್ ಪ್ರೆಸ್ ರೈಲಿನ 8 ಬೋಗಿಗಳು ಹಳಿ ತಪ್ಪಿ ಈ ದುರಂತ ಸಂಭವಿಸಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಗಾಯಗೊಂಡವರನ್ನು ರಾಯಘಡ, ಪಾರ್ವತಿಪುರಂ ಹಾಗೂ ವಿಶಾಖಪಟ್ಟಣಂ ಆಸ್ಪತ್ರೆಗಳಿಗೆ ದಾಖಲಿಸಿದ್ದಾರೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ಕ್ಷಿಪ್ರ ಕಾರ್ಯಚರಣೆ ಪಡೆ ಹಾಗೂ ಅರೆಸೇನಾ ಪಡೆ ಪರಿಹಾರ ಹಾಗೂ ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಂಡಿವೆ. ಭುವನೇಶ್ವರದ ಪೂರ್ವ ಕರಾವಳಿ ರೈಲ್ವೆ ವಿಭಾಗದ ಅಧಿಕಾರಿಗಳು ಪರಿಸ್ಥಿತಿಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.
ದುರಂತದ ಬಗ್ಗೆ ಮಾಹಿತಿ ಪಡೆಯಲು ಸಹಾಯವಾಣಿ ಸಂಖ್ಯೆ:
06856-223400, 06856-223500
09439741181, 09439741071
07681878777.
08922-221202, 08922-221206