ಮಾಸ್ಕೋ(ಡಿ.25): ಆಲ್ಕೋ ಹಾಲ್ ರೀತಿಯ ಕಿಕ್ ಕೊಡುತ್ತೆ ಎಂದು ಬಾತ್ ಆಯಿಲ್ ಕುಡಿದ 25 ಮಂದಿ ದುರ್ಮರಣಕ್ಕೀಡಾಗಿರುವ ಘಟನೆ ಸೈಬೀರಿಯಾದ ಇರ್ಕುಟ್ಸ್ ನಗರದಲ್ಲಿ ನಡೆದಿದೆ.

ಆರ್ಥಿಕ ಸಂಕಷ್ಟದಲ್ಲಿ ಒದ್ದಾಡುತ್ತಿರುವ ರಷ್ಯಾದ ಕೆಲವೆಡೆ ಆಲ್ಕೋಹಾಲ್ ಖರೀದಿಸಲು ಆಗದ ಜನ ಅದರಂತೆ ಕಿಕ್ ನೀಡುವ ಅಗ್ಗದ ಬೆಲೆಯಲ್ಲಿ ಸಿಗುವ ವಸ್ತುಗಳ ಮೊರೆ ಹೋಗುತ್ತಿದ್ದಾರೆ. ಅದರ ಪರಿಣಾಮವೇ ಈ ದುರ್ಮರಣ.

ಮಾಸ್ಕೋದಿಂದ 2600 ಮೈಲಿ ದೂರದಲ್ಲಿರುವ ನಗರ ಿದಾಗಿದ್ದು, 6000 ಜನ ವಾಸವಿದ್ದಾರೆ. ತನಿಖಾಧಿಕಾರಿಗಳು ಇವರಿಗೆ ಬಾತ್ ಆಯಿಲ್ ಸರಬರಾಜು ಮಾಡಿದ ಇಬ್ಬರನ್ನ ಬಂಧಿಸಿದ್ದಾರೆ.

ಈ ದ್ರವ್ಯವನ್ನ ಸೇವಿಸಬಾರದು ಎಂದು ಬಾತ್ ಆಯಿಲ್ ಮೇಲೆ ಬರದಿದ್ದರೂ ಅದನ್ನ ಕಡೆಗಣಿಸಿ ಕುಡಿದಿದ್ದರಿಂದ ಈ ಅವಘಡ ನಡೆದಿದೆ.