Asianet Suvarna News Asianet Suvarna News

ಒಡಿಶಾದ ಆಸ್ಪತ್ರೆ'ಯಲ್ಲಿ ಬೆಂಕಿ : 23 ಸಾವು

ಮೊದಲ ಮಹಡಿಯಲ್ಲಿದ್ದ ಐಸಿಯು'ನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಹೊತ್ತಿಕೊಂಡು ಈ ದುರಂತ ಸಂಭವಿಸಿದೆ.

23 killed as fire engulfs SUM hospital in Bhubaneswar

ಭುವನೇಶ್ವರ(ಅ.17): ಒಡಿಶಾ ರಾಜಧಾನಿ ಭುವನೇಶ್ವರ್​ ಆಸ್ಪತ್ರೆಯಲ್ಲಿ ಅಗ್ನಿ ಅವಘಡ ಸಂಭವಿಸಿ 23 ಕ್ಕೂ ಹೆಚ್ಚು ಮಂದಿ ಸಾವನಪ್ಪಿದ್ದು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಭುವನೇಶ್ವರದ ಖಾಸಗಿ ಆಸ್ಪತ್ರೆ ಸಮ್'ನ ಮೊದಲ ಮಹಡಿಯಲ್ಲಿದ್ದ ಐಸಿಯು'ನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಹೊತ್ತಿಕೊಂಡು ಈ ದುರಂತ ಸಂಭವಿಸಿದೆ.

ಐಸಿಯುನಲ್ಲಿ ಸುಮಾರು 30ಕ್ಕೂ ಹೆಚ್ಚು ಮಂದಿ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದರು. 9 ಅಗ್ನಿಶಾಮಕ ದಳದಿಂದ ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ. ಆಸ್ಪತ್ರೆಯಲ್ಲಿದ್ದ ರೋಗಿಗಳನ್ನು ಬೇರೆ ವಾರ್ಡ್​ಗೆ ಶಿಫ್ಟ್ ಮಾಡಲಾಗಿದೆ. ಭುವನೇಶ್ವರ್​'ನ  ಸಮ್' ಆಸ್ಪತ್ರೆ 752 ಬೆಡ್ ಹೊಂದಿದ್ದು, 2005ರಲ್ಲಿ ಸ್ಥಾಪಿಸಲಾಗಿತ್ತು.

Follow Us:
Download App:
  • android
  • ios