ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ 22 ವರ್ಷಗಳ ಹಿಂದೆ ದಾಖಲಾಗಿದ್ದ ಪ್ರಕರಣವನ್ನು ಅವರದ್ದೇ ನೇತೃತ್ವದ ರಾಜ್ಯ ಸರ್ಕಾರ ವಾಪಸ್ ಪಡೆದಿದೆ.

ಲಖನೌ (ಡಿ.28): ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ 22 ವರ್ಷಗಳ ಹಿಂದೆ ದಾಖಲಾಗಿದ್ದ ಪ್ರಕರಣವನ್ನು ಅವರದ್ದೇ ನೇತೃತ್ವದ ರಾಜ್ಯ ಸರ್ಕಾರ ವಾಪಸ್ ಪಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದರಿಂದಾಗಿ ಆದಿತ್ಯನಾಥ್ ಅವರು ತಮಗೆ ತಾವೇ ಕ್ಲೀನ್‌ ಚಿಟ್ ಪಡೆದುಕೊಂಡಂತಾಗಿದೆ. ರಾಜಕೀಯ ನಾಯಕರ ವಿರುದ್ಧದ ಗಂಭೀರವಲ್ಲದ ಪ್ರಕರಣ ವಾಪಸ್ ಪಡೆಯಲು ಇತ್ತೀಚೆಗೆ ‘ಉ. ಪ್ರ. ಕ್ರಿಮಿನಲ್ ತಿದ್ದುಪಡಿ ಕಾಯ್ದೆ-2017’ ಅಂಗೀಕರಿಸಲಾಗಿತ್ತು.

ಗಂಭೀರವಲ್ಲದ 20 ಸಾವಿರ ಪ್ರಕರಣಗಳನ್ನು ರದ್ದು ಮಾಡಲು ಈ ಕಾಯ್ದೆ ರೂಪಿಸಲಾಗಿತ್ತು. ಆ ಪ್ರಕಾರ, ಯೋಗಿ ನಿಷೇಧಾಜ್ಞೆ ಉಲ್ಲಂಘಿಸಿ ಭಾಷಣ ಮಾಡಿದ 22 ವರ್ಷದ ಹಳೆಯ ಪ್ರಕರಣವನ್ನು ಈಗ ರದ್ದು ಮಾಡಲಾಗಿದೆ.