ಬೆಂಗಳೂರು: ರಾಜ್ಯ ಸರ್ಕಾರವು 22 ಕೆಎಎಸ್ ಅಧಿಕಾರಿಗಳನ್ನು ಮತ್ತು ಇಬ್ಬರು ಜಿಲ್ಲಾಧಿಕಾರಿಗಳಿಗೆ ಹೆಚ್ಚುವರಿ ಹೊಣೆಗಾರಿಕೆಯನ್ನು ನೀಡಿ ಬುಧವಾರ ವರ್ಗಾವಣೆಗೊಳಿಸಿಸಿದೆ. ಚಾಮರಾಜನಗರ ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ.ಗಾಯತ್ರಿ ಅವರಿಗೆ ಮಲೆ ಮಹದೇಶ್ವರ ಸ್ವಾಮಿ ಪ್ರಾಧಿಕಾರದ ಕಾರ್ಯದರ್ಶಿ ಹುದ್ದೆ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಹಾಸನ) ವಿಶೇಷ ಭೂಸ್ವಾಧೀನಾಧಿಕಾರಿ ಜಿ.ಎನ್.ಮಂಜುನಾಥ್ ಅವರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಹೊನ್ನವಾರದ ವಿಶೇಷ ಭೂಸ್ವಾಧೀನಾಧಿಕಾರಿ ಹುದ್ದೆಯನ್ನು ಹೆಚ್ಚುವರಿಯಾಗಿ ಜವಾಬ್ದಾರಿ ವಹಿಸಲಾಗಿದೆ. 

ವರ್ಗಾವರ್ಗಿ ಪಟ್ಟಿ: ಕೆ. ವಿದ್ಯಾಕುಮಾರಿ- ಹೆಚ್ಚುವರಿ ಜಿಲ್ಲಾಧಿಕಾರಿ, ಉಡುಪಿ. ಸಂಗಪ್ಪ- ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ನಿರ್ದೇಶಕ. ಎನ್.ಚಂದ್ರಶೇಖರ್ - ಸರ್ಕಾರದ ಉಪಕಾರ್ಯದರ್ಶಿ 2, ನಗರಾಭಿವೃದ್ಧಿ ಇಲಾಖೆ. ಡಾ.ರುದ್ರೇಶ್ ಎಸ್ ಘಾಳಿ- ಹೆಚ್ಚುವರಿ ಜಿಲ್ಲಾಧಿಕಾರಿ, ಬೀದರ್. ಹರ್ಷ ಎಸ್.ಶೆಟ್ಟಿ-ಕೌನ್ಸಿಲ್  ಸೆಕ್ರೆಟರಿ, ಕಲಬುರಗಿ ಮಹಾನಗರ ಪಾಲಿಕೆ. ಉದಯ ಕುಮಾರ್ ಶೆಟ್ಟಿ- ಉಪ ಆಯುಕ್ತ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ, ಬೆಂಗಳೂರು. ಎ. ದೇವರಾಜು-ವಿಶೇಷ ಭೂಸ್ವಾಧೀನಾ ಧಿಕಾರಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಮೈಸೂರು. ಕೆ.ಎಂ.ಸುರೇಶ್ ಕುಮಾರ್-ವಿಶೇಷ ಭೂಸ್ವಾಧೀನಾಧಿಕಾರಿ, ಕೆಐಎಡಿಬಿ.  ವಿಜಯಕುಮಾರ್ ಹೊನಕೇರಿ-ವಿಶೇಷ ಭೂಸ್ವಾಧೀನಾಕಾರಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಕಲಬುರಗಿ. ಬಿ. ಆರ್.ರೂಪಾ- ಉಪವಿಭಾಗಾಧಿಕಾರಿ, ತರೀಕೆರೆ, ಚಿಕ್ಕಮಗಳೂರು. ಡಾ.ನಾಗೇಂದ್ರ ಎಫ್. ಹೊನ್ನಳ್ಳಿ- ಮುಖ್ಯ ಆಡಳಿತಾಧಿ ಕಾರಿ, ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆ, ಶಿವಮೊಗ್ಗ. ಜಿ.ಎನ್.ಶ್ವೇತಾ-ಉಪನಿದೇಶರ್ಕರು (ಯೋಜನೆ) ಗಣಿ ಮತ್ತು ಭೂವಿಜ್ಞಾನ ಇಲಾಖೆ, ಬೆಂಗಳೂರು. ವಿ.ಆರ್.ಶೈಲಜಾ-ಉಪವಿಭಾಗಾಧಿಕಾರಿ, ಪಾಂಡವಪುರ, ಮಂಡ್ಯ. ಶಿವಪ್ಪ ಯಲ್ಲಪ್ಪ ಭಜಂತ್ರಿ- ಉಪವಿಭಾಗಾಧಿಕಾರಿ, ಬೈಲಹೊಂಗಲ. ತಿಪ್ಪೇಸ್ವಾಮಿ- ಕೌನ್ಸಿಲ್ ಕಾರ್ಯದರ್ಶಿ, ದಾವಣಗೆರೆ ಪಾಲಿಕೆ. ಟಿ.ಎನ್. ಕೃಷ್ಣಮೂರ್ತಿ- ಉವಿಭಾಗಾಧಿಕಾರಿ, ರಾಮನಗರ. ಪಿ.  ಎನ್.ಲೋಕೇಶ್- ಉಪವಿಭಾಗಾ ಧಿಕಾರಿ, ಹೊಸಪೇಟೆ, ಕುಮಾರಸ್ವಾಮಿ - ಉಪವಿಭಾಗಾಧಿಕಾರಿ, ದಾವಣಗೆರೆ.