ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ತನಿಖೆಯನ್ನು ರಾಜ್ಯ ಸರ್ಕಾರ ಎಸ್’ಐಟಿಗೆ ವಹಿಸಿದ್ದು ಐಜಿ ಬಿಕೆ ಸಿಂಗ್ ನೇತೃತತ್ವದಲ್ಲಿ 21 ಪೊಲೀಸ್ ಅಧಿಕಾರಿಗಳ ತಂಡವನ್ನು ರಚಿಸಲಾಗಿದೆ. ಹಿರಿಯ ಐಪಿಎಸ್ ಅಧಿಕಾರಿ ಅನುಚೇತ್ ತನಿಖೆಯ ನೇತೃತ್ವ ವಹಿಸಿಕೊಳ್ಳಲಿದ್ದಾರೆ. ಈ ಕೆಳಗಿನ ಅಧಿಕಾರಿಗಳು ತಂಡದಲ್ಲಿದ್ದಾರೆ.

ಬೆಂಗಳೂರು (ಸೆ.06): ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ತನಿಖೆಯನ್ನು ರಾಜ್ಯ ಸರ್ಕಾರ ಎಸ್’ಐಟಿಗೆ ವಹಿಸಿದ್ದು ಐಜಿ ಬಿಕೆ ಸಿಂಗ್ ನೇತೃತತ್ವದಲ್ಲಿ 21 ಪೊಲೀಸ್ ಅಧಿಕಾರಿಗಳ ತಂಡವನ್ನು ರಚಿಸಲಾಗಿದೆ. ಹಿರಿಯ ಐಪಿಎಸ್ ಅಧಿಕಾರಿ ಅನುಚೇತ್ ತನಿಖೆಯ ನೇತೃತ್ವ ವಹಿಸಿಕೊಳ್ಳಲಿದ್ದಾರೆ. ಈ ಕೆಳಗಿನ ಅಧಿಕಾರಿಗಳು ತಂಡದಲ್ಲಿದ್ದಾರೆ.

ಡಿಸಿಪಿ ಜೀತೇಂದ್ರ ಕಣಗಾವಿ, ಉಪ ನಿರ್ದೇಶಕ ಹರೀಶ್ ಪಾಂಡೆ, ಎಸಿಪಿ ಕೆ ಪಿ ರವಿಕುಮಾರ್, ಡಿವೈಎಸ್ಪಿ ಎನ್ ಬಿ ಶಕ್ರಿ, ಡಿವೈಎಸ್ಪಿ ಜಗನ್ನಾಥ್ ರೈ, ಡಿವೈಎಸ್ಪಿ ಕೆ ಎಸ್ ನಾಗರಾಜ್, ಪೊಲೀಸ್ ಇನ್ಸ್’ಪೆಕ್ಟರ್’ಗಳಾದ ಟಿ ರಂಗಪ್ಪ, ಆರ್.ಪಿ ಅನಿಲ್, ಅಯ್ಯಣ್ಣ ರೆಡ್ಡಿ, ಆರ್, ಪುನೀತ್ ಕುಮಾರ್, ಡಿ ಎಂ ಪ್ರಶಾಂತ್ ಬಾಬು, ಜೆ. ಅಶ್ವತ್ ಗೌಡ, ಟಿ, ಶ್ರೀನಿವಾಸ್, ಸತ್ಯನಾರಾಯಣ, ಮಂಜುನಾಥ್, ಎಂ,ಆರ್ ಹರೀಶ್, ಕುಮಾರಸ್ವಾಮಿ ಹಾಗೂ ರವಿ ತಂಡದಲ್ಲಿದ್ದಾರೆ.

ಇದರಲ್ಲಿರುವ ಎಲ್ಲಾ ಅಧಿಕಾರಿಗಳು ಈ ಕ್ಷಣದಿಂದಲೇ ಹಾಲಿ ಪದವಿ, ಜವಾಬ್ದಾರಿಗಳಿಂದ ವಿಮುಕ್ತಿಗೊಂಡು ಪ್ರಕರಣದ ತನಿಖೆಗೆ ಮೇಲ್ವಿಚಾರಣಾಧಿಕಾರಿ ಐಜಿಪಿ ಬಿಜಯ್ ಕುಮಾರ್’ಗೆ ವರದಿ ಮಾಡಿಕೊಳ್ಳಿ ಎಂದು ಇಲಾಖಾ ಮುಖ್ಯಸ್ಥ ರೂಪಕ್ ಕುಮಾರ್ ದತ್ತಾ ಆದೇಶಿಸಿದ್ದಾರೆ.