Asianet Suvarna News Asianet Suvarna News

ಭರ್ಜರಿ ಗುಡ್ ನ್ಯೂಸ್ : ಜಪಾನ್ ಹಿಂದಿಕ್ಕಲಿದೆ ಭಾರತ

ಭಾರತ 2030ನೇ ಇಸ್ವಿ ವೇಳೆಗೆ ಜರ್ಮನಿ ಹಾಗೂ ಜಪಾನ್‌ನಂತಹ ಮುಂದುವರಿದ ದೇಶಗಳನ್ನು ಹಿಂದಿಕ್ಕಿ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲಿದೆ ಎಂದು ವರದಿಯೊಂದು ಬಹಿರಂಗಪಡಿಸಿದೆ. 

2030 India Set To overtake Japan As No 3
Author
Bengaluru, First Published Sep 27, 2018, 7:44 AM IST

ನವದೆಹಲಿ: ಶೀಘ್ರಗತಿಯಲ್ಲಿ ಆರ್ಥಿಕ ಪ್ರಗತಿ ಸಾಧಿಸುತ್ತಿರುವ ಭಾರತ 2030ನೇ ಇಸ್ವಿ ವೇಳೆಗೆ ಜರ್ಮನಿ ಹಾಗೂ ಜಪಾನ್‌ನಂತಹ ಮುಂದುವರಿದ ದೇಶಗಳನ್ನು ಹಿಂದಿಕ್ಕಿ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲಿದೆ ಎಂದು ಎಚ್‌ಎಸ್‌ಬಿಸಿ ಹೋಲ್ಡಿಂಗ್ಸ್‌ ಪಿಎಲ್‌ಸಿ ಕಂಪನಿಯ ವರದಿ ತಿಳಿಸಿದೆ.

2030ರ ಹೊತ್ತಿಗೆ ಅಮೆರಿಕವನ್ನು ನಂ.1 ಸ್ಥಾನದಿಂದ ಕೆಳಗಿಳಿಸಲಿರುವ ಚೀನಾ, ಪ್ರಥಮ ಸ್ಥಾನಕ್ಕೆ ಏರಲಿದೆ. ಅಮೆರಿಕ ಎರಡನೇ ಸ್ಥಾನಕ್ಕೆ ಜಾರಲಿದೆ. ಭಾರತ ಮೂರನೇ ಸ್ಥಾನಕ್ಕೆ ಜಿಗಿಯಲಿದೆ. ಸದ್ಯ ಭಾರತ ಆರನೇ ಸ್ಥಾನದಲ್ಲಿದೆ ಎಂದು ವರದಿ ತಿಳಿಸಿದೆ.

2030ರ ವೇಳೆಗೆ ಚೀನಾದ ಆರ್ಥಿಕತೆ 1880 ಲಕ್ಷ ಕೋಟಿ ರು., ಅಮೆರಿಕದ್ದು 1820 ಲಕ್ಷ ಕೋಟಿ ರು. ಹಾಗೂ ಭಾರತದ್ದು 428 ಲಕ್ಷ ಕೋಟಿ ರು. ನಷ್ಟಿರಲಿದೆ ಎಂದು ವರದಿ ಹೇಳಿದೆ.

Follow Us:
Download App:
  • android
  • ios