ಯುಪಿಎಸ್‌ಸಿ ಟಾಪರ್‌ ಕನಿಷ್ಕ್ ಪಡೆದದ್ದು ಶೇ.55.35 ಅಂಕ| ಪಾಸಾದ ಅಭ್ಯರ್ಥಿಗಳ ಅಂಕಪಟ್ಟಿಪ್ರಕಟ

ನವದೆಹಲಿ[ಏ.19]: ಕೇಂದ್ರ ಲೋಕಸೇವಾ ಆಯೋಗ ನಡೆಸಿದ್ದ 2018ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳ ಅಂಕಪಟ್ಟಿಬಿಡುಗಡೆ ಮಾಡಲಾಗಿದೆ. ಅಗ್ರ ಶ್ರೇಯಾಂಕ ಪಡೆದ ಕನಿಷ್‌್ಕ ಕಟಾರಿಯಾ ಶೇ.55.35 ಅಂಕ ಪಡೆದುಕೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಾಂಬೆ ಐಐಟಿಯ ಬಿ.ಟೆಕ್‌ ವಿದ್ಯಾರ್ಥಿ ಆಗಿರುವ ಕನಿಷ್‌್ಕ ಒಟ್ಟು 2,025 ಅಂಕಗಳಿಗೆ 1,121 ಅಂಕಗಳನ್ನು ಪಡೆದುಕೊಂಡಿದ್ದಾರೆ. ಅವರು ಲಿಖಿತ ಪರೀಕ್ಷೆಯಲ್ಲಿ 942 ಅಂಕ, ಸಂದರ್ಶನದಲ್ಲಿ 179 ಅಂಕಗಳನ್ನು ಪಡೆದುಕೊಂಡಿದ್ದಾರೆ. 1,750 ಅಂಕಗಳಿಗೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನಕ್ಕೆ 275 ಅಂಕಗಳನ್ನು ನಿಗದಿಪಡಿಸಲಾಗಿತ್ತು. ಎರಡನೇ ರ‍್ಯಾಂಕ್‌ ಗಳಿಸಿದ ಅಕ್ಷತ್‌ ಜೈನ್‌ ಶೇ.53.3 ಅಂಕ ಪಡೆದಿದ್ದಾರೆ.

UPSC ಟಾಪರ್‌ಗಳ ಯಶಸ್ಸಿನ ಗುಟ್ಟು ರಟ್ಟು!

ಯುಪಿಎಸ್‌ಸಿ ಫಲಿತಾಂಶ ಏ.5ರಂದು ಪ್ರಕಟಗೊಂಡಿದ್ದು, 759 ಅಭ್ಯರ್ಥಿಗಳು ತೇರ್ಗಡೆಯಾಗಿದ್ದರು. 759ನೇ ರಾರ‍ಯಂಕ್‌ ಪಡೆದ ಬಿಭುತಿ ಭೂನ್‌ ನಾಯಕ್‌ ಶೇ.35.45 ಅಂಕ (718 ಅಂಕ) ಪಡೆದಿದ್ದಾರೆ.