ಈ ಬಾರಿಯ ಚುನಾವಣೆಯ ವಿಶೇಷತೆಗಳು

2018 Karnataka Assembly Election Specialties
Highlights

ಈ ಬಾರಿಯ ಚುನಾವಣೆಯ ವಿಶೇಷತೆಗಳು

51 ಮೀಸಲು ಕ್ಷೇತ್ರಗಳು

ಕರ್ನಾಟಕದಲ್ಲಿ ಒಟ್ಟು 224 ವಿಧಾನ ಸಭಾ ಕ್ಷೇತ್ರಗಳಿದ್ದು ಇದರಲ್ಲಿ 36 ಕ್ಷೇತ್ರಗಳು ಪರಿಶಿಷ್ಟಜಾತಿಗೆ ಮತ್ತು 15 ಕ್ಷೇತ್ರಗಳು ಪರಿಶಿಷ್ಟಪಂಗಡಕ್ಕೆ ಮೀಸಲಾಗಿರಲಿವೆ.

4.96 ಕೋಟಿ ಮತದಾರರು

ಫೆಬ್ರವರಿ 28 ಮತದಾರರ ಪಟ್ಟಿಅಂತಿಮವಾಗಿದ್ದು ರಾಜ್ಯದಲ್ಲಿ 4,96,82,357 ಮಂದಿ ಮತದಾನ ಮಾಡಲು ಆರ್ಹತೆ ಹೊಂದಿದ್ದಾರೆ. ಇದರಲ್ಲಿ ಪುರುಷ ಮತದಾರರ ಪ್ರಮಾಣ 2,51,71,219 ಮತ್ತು ಮಹಿಳಾ ಮತದಾರರ ಪ್ರಮಾಣ 2,44,76,840.

ಭಾವಚಿತ್ರ ಸಹಿತ ಮತದಾರರ ಪಟ್ಟಿ

ಭಾವಚಿತ್ರ ಸಹಿತ ಮತದಾರರ ಪಟ್ಟಿಕರ್ನಾಟಕದಲ್ಲಿ ಸಿದ್ಧವಾಗಿದ್ದು ಇದರ ಶೇ. 99.47ರಷ್ಟುಭಾವಚಿತ್ರ ಸಹಿತ ಮತದಾರರ ಪಟ್ಟಿಇದೆ. ಮತದಾರರನ್ನು ಮತಗಟ್ಟೆಯಲ್ಲಿ ಮತದಾನದ ಸಮಯದಲ್ಲಿ ಗುರುತಿಸುವುದು ಕಡ್ಡಾಯವಾಗಿದ್ದು ಕರ್ನಾಟಕದಲ್ಲಿ ಶೇ. 97.46ರಷ್ಟುಮತದಾರರ ಭಾವಚಿತ್ರ ಗುರುತಿನ ಚೀಟಿ (ಉPಐಇ) ವಿತರಿಸಲಾಗಿದೆ. ಭಾವಚಿತ್ರ ಸಹಿತ ಗುರುತಿನ ಚೀಟಿ ಪಡೆದುಕೊಳ್ಳದೇ ಇರುವವರು ತುರ್ತಾಗಿ ವಿಧಾನಸಭಾ ಕ್ಷೇತ್ರದ ಮತದಾರರ ನೋಂದಾವಣಿ ಅಧಿಕಾರಿಗಳ ಬಳಿ ತುರ್ತಾಗಿ ಚೀಟಿ ಪಡೆಯುವಂತೆ ಕೋರಲಾಗಿದೆ.

ಮತದಾನ ಕೇಂದ್ರ ಪ್ರಮಾಣದಲ್ಲಿ ಶೇ.9 ಏರಿಕೆ

2013ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 52,034 ಮತದಾನ ಕೇಂದ್ರಗಳಿದ್ದವು. ಇದೀಗ 2018ರ ವಿಧಾನ ಸಭಾ ಚುನಾವಣೆಯಲ್ಲಿ 56,696 ಮತದಾನ ಕೇಂದ್ರಗಳಿರಲಿವೆ. ಅಂದರೆ ಕಳೆದ ವಿಧಾನ ಸಭಾ ಚುನಾವಣೆಗಿಂತ ಈ ಬಾರಿಯ ಚುನಾವಣೆಗೆ ರಾಜ್ಯದ ಮತಕೇಂದ್ರಗಳ ಪ್ರಮಾಣ ಶೇ.9ರಷ್ಟುಹೆಚ್ಚಾಗಿದೆ.

ಮತಗಟ್ಟೆಯಲ್ಲಿ ಕಡ್ಡಾಯ ಕನಿಷ್ಠ ಸವಲತ್ತು

ಮುಖ್ಯ ಚುನಾವಣಾ ಅಧಿಕಾರಿಯು ಪ್ರತಿ ಮತಗಟ್ಟೆಯಲ್ಲಿ ಕನಿಷ್ಠ ಸವಲತ್ತುಗಳಾದ ಕುಡಿಯುವ ನೀರು, ನೆರಳಿನ ವ್ಯವಸ್ಥೆ, ಶೌಚಾಲಯ, ಅಂಗವಿಕಲ ಮತದಾರರಿಗೆ ಅನುಕೂಲವಾಗುವಂತೆ ರಾರ‍ಯಂಪ್‌, ಮತದಾನದ ನಿಗದಿತ ರೀತಿಯ ಕಂಪಾರ್ಟ್‌ಮೆಂಟ್‌ ಇರಬೇಕು.

ದಿವ್ಯಾಂಗಸ್ನೇಹಿ ಮತಗಟ್ಟೆಗಳು

ದಿವ್ಯಾಂಗರಿಗೆ ಅನುಕೂಲವಾಗುವಂತೆ ಮತಗಟ್ಟೆಗಳು ಗ್ರೌಂಡ್‌ಫೆä್ಲೕರ್‌ನಲ್ಲಿ ಇರಬೇಕು. ವೀಲ… ಚೇರ್‌ನಲ್ಲಿ ಬರಲು ಅನುಕೂಲವಾಗುವ ರೀತಿಯಲ್ಲಿ ರಾರ‍ಯಂಪ್‌ ಇರಬೇಕು. ವಿಧಾನಸಭಾ ಕ್ಷೇತ್ರಗಳಲ್ಲಿನ ದಿವ್ಯಾಂಗ ಮತದಾರರನ್ನು ಮೊದಲೇ ಗುರುತಿಸಿ ಮತದಾನದ ದಿನ ಸರಾಗವಾಗಿ ಮತ ಚಲಾವಣೆ ನಡೆಸಲು ಪೂರಕ ಕ್ರಮ ಕೈಗೊಳ್ಳಲು ಚುನಾವಣಾ ಆಯೋಗ ಮುಂದಾಗಿದೆ. ಅವರಿಗೆ ಆದ್ಯತೆಯ ಮೇರೆಗೆ ಮತ ಚಲಾವಣೆಗೆ ಅವಕಾಶ ನೀಡಬೇಕು ಹಾಗೆಯೇ ಅವರನ್ನು ಮತ ಚಲಾವಣೆಯ ಪ್ರದೇಶದ ಸನಿಹದವರೆಗೆ ವಾಹನದಲ್ಲಿ ಬರಲು ಅವಕಾಶ ನೀಡಬೇಕು. ಅವರೊಂದಿಗೆ ಚುನಾವಣಾಧಿಕಾರಿಗಳು ಸಂವೇದನೆಯಿಂದ ವರ್ತಿಸಬೇಕು ಎಂದು ಚುನಾವಣಾ ಆಯೋಗ ಹೇಳಿದೆ.

ಮತದಾರರಿಗೆ ನೆರವು ನೀಡುವ ಬೂತ್‌

ಪ್ರತಿ ಮತಗಟ್ಟೆಯ ಬಳಿ ಚುನಾವಣಾ ಆಯೋಗದ ವತಿಯಿಂದಲೇ ಮತದಾರರಿಗೆ ನೆರವು ನೀಡುವ ಕೇಂದ್ರ ಸ್ಥಾಪನೆ. ಇಲ್ಲಿ ಮತದಾರರಿಗೆ ಅವರ ಮತ ಚಲಾವಣೆಯ ಬೂತ್‌ ನಂಬರ್‌, ಸೀರಿಯಲ… ನಂಬರ್‌ ಮುಂತಾದವುಗಳ ಬಗ್ಗೆ ಮಾಹಿತಿ ನೀಡಲಾಗುವುದು.

ಮಹಿಳೆಯರೇ ನಿರ್ವಹಿಸುವ ಮತಗಟ್ಟೆಗಳು

ಪ್ರತಿ ವಿಧಾನ ಸಭಾ ಕ್ಷೇತ್ರದಲ್ಲಿ ಒಂದು ಮತದಾನ ಕೇಂದ್ರವು ಸಂಪೂರ್ಣವಾಗಿ ಮಹಿಳೆಯರಿಂದ ನಿರ್ವಹಿಸಲ್ಪಡಲಿದೆ. ಅಲ್ಲಿ ಎಲ್ಲ ಚುನಾವಣಾ ಆಧಿಕಾರಿಗಳು, ಪೊಲೀಸರು ಸೇರಿದಂತೆ ಭದ್ರತಾ ಸಿಬ್ಬಂದಿ ಮಹಿಳೆಯರೇ ಇರಲಿರುವುದು ವಿಶೇಷ. ರಾಜ್ಯದಲ್ಲಿ ಒಟ್ಟು 224 ಮಹಿಳೆಯರಿಂದಲೇ ನಿರ್ವಹಣೆಗೆ ಒಳಪಡುವ ಮತದಾನ ಕೇಂದ್ರಗಳಿರಲಿದ್ದು ಇದು ಕರ್ನಾಟಕದಲ್ಲಿ ಮೊದಲ ಬಾರಿಗೆ ನಡೆಯಲಿರುವ ವಿದ್ಯಮಾನ.

ಅಫಿಡವಿಟ್‌ನ ಎಲ್ಲ ಕಾಲಂ ಭರ್ತಿ ಕಡ್ಡಾಯ

ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ಸಲ್ಲಿಸುವ ಅಫಿಡವಿಟ್‌ನ ಎಲ್ಲ ಕಾಲಂಗಳು ಭರ್ತಿ ಆಗಿರುವುದು ಕಡ್ಡಾಯವಾಗಿದೆ. ಒಂದು ವೇಳೆ ಯಾವುದಾದರೂ ಕಾಲಂ ಭರ್ತಿ ಆಗಿರದಿದ್ದರೆ ರಿಟರ್ನಿಂಗ್‌ ಆಫೀಸರ್‌ ಸಂಬಂಧಪಟ್ಟಉಮೇದುದಾರರಿಗೆ ಕಾಲಂ ಭರ್ತಿ ಮಾಡಿ ಪರಿಷ್ಕೃತ ನಾಮಪತ್ರ ಸಲ್ಲಿಸಲು ಅವಕಾಶ ನೀಡಲಿದ್ದಾರೆ. ಒಂದು ವೇಳೆ ಅಭ್ಯರ್ಥಿ ಆಗಲೂ ಕಾಲಂ ತುಂಬಲು ವಿಫಲರಾದರೆ ನಾಮಪತ್ರ ತಿರಸ್ಕಾರಗೊಳ್ಳಲಿದೆ.

ನೋ ಡ್ಯೂಸ್‌ ಸರ್ಟಿಫಿಕೇಟ್‌

ಅಭ್ಯರ್ಥಿಗಳು ವಿದ್ಯುತ್‌ ಬಿಲ…, ನೀರು ಮತ್ತು ಟೆಲಿಫೋನ್‌ ಮತ್ತು ಕಳೆದ 10 ವರ್ಷಗಳಲ್ಲಿ ಸರ್ಕಾರಿ ಮನೆಗಳಲ್ಲಿ ವಾಸಿಸುತ್ತಿದ್ದರೆ ಅದರ ಬಾಡಿಗೆ ಪಾವತಿ ಮಾಡಿರುವ ಬಗ್ಗೆಗಿನ ದಾಖಲೆಗಳನ್ನು ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಏ.24ರಂದು ಅಪರಾಹ್ನ 3 ಗಂಟೆಯೊಳಗೆ ನೋಟರಿಯವರ ಅನುಮೋದನೆಯೊಂದಿಗೆ ಸಲ್ಲಿಸಬೇಕು.

ಮೊದಲ ಮತ್ತು ಕೊನೆಯ 72 ಗಂಟೆ ಕಟ್ಟುನಿಟ್ಟಿನ ನೀತಿ ಸಂಹಿತೆ

ಚುನಾವಣಾ ದಿನಾಂಕ ಘೋಷಣೆ ಆಗುತ್ತಿದ್ದಂತೆ ನೀತಿ ಸಂಹಿತೆ ಜಾರಿಗೆ ಬಂದಿದೆ. ನೀತಿ ಸಂಹಿತೆ ಘೋಷಣೆಯಾದ ಮೊದಲ 72 ಗಂಟೆ ನೀತಿ ಸಂಹಿತೆ ಜಾರಿಗೆ ವೇಗದ, ಪರಿಣಾಮಕಾರಿ ಮತ್ತು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ಆನಂತರ ಇದೇ ಸ್ಥಿತಿಯನ್ನು ಕಾಪಾಡಿಕೊಳ್ಳಬೇಕು. ಚುನಾವಣೆ ಮುಕ್ತಾಯಕ್ಕೆ 72 ಗಂಟೆ ಬಾಕಿ ಇರುವಾಗ ಹೆಚ್ಚಿನ ಸೂಕ್ಷ್ಮತೆ, ಎಚ್ಚರಿಕೆ ಮತ್ತು ಕಟ್ಟುನಿಟ್ಟಾಗಿ ನೀತಿಸಂಹಿತೆ ಪಾಲಿಸಬೇಕು ಎಂದು ಕೇಂದ್ರ ಚುನಾವಣಾ ಆಯೋಗ ಹೇಳಿದೆ.

ಪರಿಸರ ಸ್ನೇಹಿಯೂ ಹೌದು

ಚುನಾವಣೆಯನ್ನು ಮಹಿಳಾ ಮತ್ತು ಅಂಗವಿಕಲರ ಸ್ನೇಹಿಯನ್ನಾಗಿಸುವ ಜೊತೆ ಜೊತೆಗೆ ಪರಿಸರ ಸ್ನೇಹಿಯನ್ನಾಗಿಸಲು ಕೂಡ ಚುನಾವಣಾ ಆಯೋಗ ಮುಂದಾಗಿದೆ. ಪ್ರಚಾರ ಸಾಮಾಗ್ರಿಗಳಲ್ಲಿ ಪರಿಸರ ಸ್ನೇಹಿ ವಸ್ತುಗಳನ್ನು ಬಳಸಬೇಕು ಎಂದು ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳಿಗೆ ಚುನಾವಣಾ ಆಯೋಗ ಸೂಚಿಸಿದೆ. ಪ್ಲಾಸ್ಟೀಕ…, ಪಾಲಿಥಿನ… ಮುಂತಾದ ಪರಿಸರಕ್ಕೆ ಮಾರಕವಾದ ವಸ್ತುಗಳನ್ನು ಬಳಸದಿರುವಂತೆ ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳಿಗೆ ತಿಳಿಹೇಳುವಂತೆ ಚುನಾವಣಾಧಿಕಾರಿಗಳಿಗೆ ಆಯೋಗವು ಸೂಚಿಸಿದೆ.

ಧ್ವನಿವರ್ಧಕ ಬಳಕೆಗೆ ನಿರ್ಬಂಧ

ಚುನಾವಣಾ ದಿನಾಂಕ ಘೋಷಣೆಯಾದಂದಿನಿಂದ ಮತ ಎಣಿಕೆ ನಡೆದು ಫಲಿತಾಂಶ ಪ್ರಕಟವಾಗುವವರೆಗೆ ಸಾರ್ವಜನಿಕರನ್ನು ಉದ್ದೇಶಿಸಿ ಧ್ವನಿವರ್ಧಕಗಳ ಬಳಕೆಯನ್ನು ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ನಿಷೇಧಿಸಲಾಗಿದೆ.

ನಗದಿಗೆ ದಾಖಲೆ ಇರಲಿ

ದಾಖಲೆ ರಹಿತ ನಗದನ್ನು ವಶ ಪಡಿಸಿಕೊಳ್ಳುವ ಅಧಿಕಾರ ಚುನಾವಣಾ ಆಯೋಗಕ್ಕಿದೆ. ಒಂದು ವೇಳೆ ಸೂಕ್ತ ದಾಖಲೆಗಳನ್ನು ಒದಗಿಸಿದರೆ ವಶಪಡಿಸಿಕೊಂಡ ನಗದನ್ನು ವಾಪಾಸ… ಮಾಡಬಹುದು. ನಗದು ರಾಜಕೀಯ ಪಕ್ಷಗಳಿಗೆ, ಅಭ್ಯರ್ಥಿಗಳಿಗೆ ಸೇರಿದಲ್ಲ ಎಂಬುದಕ್ಕೆ ಪುರಾವೆ ಒದಗಿಸಬೇಕಾಗುತ್ತದೆ.

ನಾಲ್ಕು ಬಗೆಯ ವೀಕ್ಷಕರು

ಚುನಾವಣಾ ಪ್ರಕ್ರಿಯೆಯ ಪಾವಿತ್ರ್ಯತೆ ಕಾಪಾಡಲು ನಾಲ್ಕು ಬಗೆಯ ವೀಕ್ಷಕರನ್ನು ನೇಮಿಸಲಾಗುತ್ತದೆ. ಸಾಮಾನ್ಯ ವೀಕ್ಷಕರು, ಪೊಲೀಸ್‌ ವೀಕ್ಷಕರು, ಖರ್ಚುವೆಚ್ಚ ವೀಕ್ಷಕರು ಮತ್ತು ಮೈಕ್ರೋ ವೀಕ್ಷಕರು ಇರಲಿದ್ದಾರೆ. ಅವರು ಇಡೀ ಚುನಾವಣಾ ಪ್ರಕ್ರಿಯೆಯ ಮೇಲೆ ಹದ್ದಿನಗಣ್ಣು ಇಡಲಿದ್ದಾರೆ.

ಮೂರು ವೆಬ…ಸೈಟ್‌ಗಳು

ಸಮಾಧಾನ್‌ ಹೆಸರಿನಲ್ಲಿ ಸಾರ್ವಜನಿಕ ದೂರು ದುಮ್ಮಾನ ಪರಿಹಾರ ಮತ್ತು ನಿರ್ವಹಣಾ ವ್ಯವಸ್ಥೆ ಇರಲಿದೆ. ಇದು ಇಲ್ಲಿ ಅಭ್ಯರ್ಥಿಗಳು, ರಾಜಕೀಯ ಪಕ್ಷಗಳು ಮತ್ತು ನಾಗರಿಕ ಸಮಾಜಕ್ಕೆ ಸೇರಿದವರು ದೂರುಗಳನ್ನು ನೀಡಬಹುದು. ಪೋಟೋ, ವೀಡಿಯೋಗಳನ್ನು ಕೂಡ ಸಲ್ಲಿಸಬಹುದು.

ಸುವಿಧ ಎಂಬ ವೆಬ…ಸೈಟ್‌ನಲ್ಲಿ 24 ಗಂಟೆಯೊಳಗೆ ಚುನಾವಣಾ ಸಂಬಂಧಿ ಅನುಮತಿಗಳನ್ನು ನೀಡಲಾಗುತ್ತದೆ. ಇದೊಂದ ಏಕಗವಾಕ್ಷಿ ಅನುಮತಿ ವ್ಯವಸ್ಥೆಯಾಗಿದೆ.

ಸುಗಮ ಎಂಬುದು ಚುನಾವಣೆಯಲ್ಲಿ ಬಳಸಲಾಗುವ ವಾಹನಗಳ ಸಂಪೂರ್ಣ ಮಾಹಿತಿಯನ್ನು ನೀಡಲಿದೆ.

ಸಿಸಿಟಿವಿ ಬಳಕೆ

ಅತಿಸೂಕ್ಷ್ಮ ಮತಗಟ್ಟೆಗಳಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಮೇಲೆ ಕಣ್ಣಿಡಲು ವೆಬ…ಕಾಸ್ಟಿಂಗ್‌, ಸಿಸಿಟಿವಿ ಬಳಕೆ ಇರಲಿದೆ.

loader