ಹಲವು ಪ್ರಥಮಗಳ ಚುನಾವಣೆ

news | Wednesday, March 28th, 2018
Suvarna Web Desk
Highlights

ಹಲವು ಪ್ರಥಮಗಳ ಚುನಾವಣೆ

1. ವಿವಿಪ್ಯಾಟ್‌ ಬಳಕೆ:

ರಾಜ್ಯದ ಎಲ್ಲ 224 ವಿಧಾನಸಭಾ ಕ್ಷೇತ್ರಗಳ 56,696 ಮತ ಕೇಂದ್ರಗಳಲ್ಲೂ ವಿವಿಪ್ಯಾಟ್‌ ಬಳಕೆ. ವಿವಿಪ್ಯಾಟ್‌ನಲ್ಲಿ ಮತದಾರನಿಗೆ ತಾನು ಮತ ಚಲಾಯಿಸಿದ ಪೇಪರ್‌ ಸ್ಲಿಪ್‌ ಲಭ್ಯ. ವಿಧಾನ ಸಭಾ ಕ್ಷೇತ್ರದ ಯಾವುದಾದರೂ ಒಂದು ಮತಕೇಂದ್ರದಲ್ಲಿ ಪೇಪರ್‌ ಸ್ಲಿಪ್‌ ಅನ್ನು ಕಂಟ್ರೋಲ… ಯುನಿಟ್‌ನೊಂದಿಗೆ ತುಲನೆ ಮಾಡಲಾಗುತ್ತದೆ. ಈ ಮೂಲಕ ಗೊಂದಲವಿಲ್ಲದಂತೆ ಮತದಾನ ನಡೆಯುವಂತೆ ನೋಡಿಕೊಳ್ಳಲಾಗುತ್ತದೆ.

2. ಮಹಿಳಾ ಮತ ಕೇಂದ್ರ: ಚುನಾವಣಾ ಅಧಿಕಾರಿಗಳಿಂದ ಹಿಡಿದು, ಪೊಲೀಸ್‌ ಮತ್ತು ಭದ್ರತಾ ಸಿಬ್ಬಂದಿ ಕೂಡ ಮಹಿಳೆಯರೇ ಇರುವ ಮತ ಕೇಂದ್ರವೊಂದು ಪ್ರತಿ ವಿಧಾನ ಸಭಾ ಕ್ಷೇತ್ರದಲ್ಲೂ ಸ್ಥಾಪನೆ.

3. ಬಾಟಮ್‌ ಆ್ಯಪ್‌: ದೇಶದಲ್ಲೇ ಮೊದಲ ಬಾರಿಗೆ ಇದರ ಪರಿಚಯ. ಎಲ್ಲ ಮತ ಕೇಂದ್ರಗಳ ಎಲ್ಲ ಮಾಹಿತಿ ಮತ್ತು ನಿರ್ದಿಷ್ಟಕಾರ್ಯನಿರ್ವಹಣೆಯ ಪ್ರಕ್ರಿಯೆಯ ಸಮಗ್ರ ಮಾಹಿತಿ ಅಧಿಕಾರಿಗಳ ಬೆರಳ ತುದಿಯಲ್ಲಿ. ಇದರಿಂದ ಯಾವುದೇ ಬೂತ್‌ನಲ್ಲಿ ಸಮಸ್ಯೆಯಾದರೂ ಕ್ಷಿಪ್ರವಾಗಿ ಬಗೆಹರಿಸಲು ಅನುಕೂಲ.

4. ಇ-ಅಟ್ಲಾಸ್‌: ಹೊಸ ಆವಿಷ್ಕಾರವಾಗಿ ಜಿಐಎಸ್‌ (ಭೌಗೋಳಿಕ ಮಾಹಿತಿ ವ್ಯವಸ್ಥೆ) ಮೂಲಕ ಚುನಾವಣಾ ಸಂಬಂಧಿ ಚಟುವಟಿಕೆಗಳ ಮೇಲೆ ನಿಗಾ, ಯೋಜನೆ ರೂಪಿಸುವುದು ಮತ್ತು ಅದನ್ನು ಜಾರಿಗೊಳಿಸುವ ಪ್ರಕ್ರಿಯೆ ಕಾರ್ಯ.

5. ಸರಕು, ಸೇವೆಗೆ ಇ-ಪೇಮೆಂಟ್‌: ಚುನಾವಣಾ ಕೆಲಸಕ್ಕೆ ನಿಯೋಜನೆಗೊಂಡ ಅಧಿಕಾರಿಗಳಿಗೆ, ಪೊಲೀಸ್‌ ಸಿಬ್ಬಂದಿಗೆ, ವಾಹನಗಳ ಮಾಲೀಕರಿಗೆ ಮತ್ತು ಚುನಾವಣಾ ಸಿಬ್ಬಂದಿ ಚಟುವಟಿಕೆಗಳಿಗೆ ಸರಕು, ಸೇವೆಗಳನ್ನು ನೀಡಿದವರಿಗೆ ಇ-ಪೇಮೆಂಚ್‌ ಮೂಲಕ ಹಣ ಪಾವತಿ.

6 ಅಂಗವಿಕಲಸ್ನೇಹಿ ಮತ ಕೇಂದ್ರ:

ಅಂಗವಿಕಲರಿಗೆ ಅನುಕೂಲವಾಗುವಂತೆ ಗ್ರೌಂಡ್‌ಫೆä್ಲೕರ್‌ನಲ್ಲೇ ಮತಗಟ್ಟೆ, ಮೊದಲೇ ಗುರುತಿಸಿ ಆದ್ಯತೆಯ ಮೇರೆ ಮತಚಲಾವಣೆಗೆ ಅವಕಾಶ, ಗಾಲಿಕುರ್ಚಿ ಚಲಿಸಲು ಅನುಕೂಲವಾಗುವ ರೀತಿಯ ರಾರ‍ಯಂಪ್‌ ಅಳವಡಿಕೆ.

7 ಇವಿಎಂನಲ್ಲಿ ಅಭ್ಯರ್ಥಿ ಚಿತ್ರ: ಈ ಹಿಂದೆ ರಾಜ್ಯದಲ್ಲಿ ಬಳಸಲಾದ ಮತಯಂತ್ರಗಳಲ್ಲಿ ಪಕ್ಷದ ಚಿಹ್ನೆ ಮತ್ತು ಹೆಸರು ಮಾತ್ರ ಇರುತ್ತಿತ್ತು. ಆದರೆ, ಇದೇ ಮೊದಲ ಬಾರಿಗೆ ಮತಯಂತ್ರಗಳಲ್ಲಿ ಅಭ್ಯರ್ಥಿಗಳ ಫೋಟೋಗಳೂ ಇರಲಿದೆ.

Comments 0
Add Comment

  Related Posts

  India Today Karnataka PrePoll Part 6

  video | Friday, April 13th, 2018

  India Today Karnataka PrePoll 2018 Part 7

  video | Friday, April 13th, 2018

  India Today Karnataka Prepoll 2018

  video | Friday, April 13th, 2018

  India Today Karnataka PrePoll Part 6

  video | Friday, April 13th, 2018
  Suvarna Web Desk