2019ರ ಚುನಾವಣೆಗೂ ಮುನ್ನ ಕೇಂದ್ರ ಸರ್ಕಾರ ಎರಡು ಸಾವಿರ ರು. ನೋಟನ್ನು ನಿಷೇಧಿಸುವ ಸಾಧ್ಯತೆ ಇದೆ. ನವೆಂಬರ್ 8 ರಂದು ಪ್ರಧಾನಿ ನರೇಂದ್ರ ಮೋದಿ ಕೈಗೊಂಡ ನೋಟು ನಿಷೇಧ ಯೋಜನೆಯ ಸಲಹೆಗಾರ ಅನಿಲ್ ಬೊಕಿಲ್ ಇಂತಹ ಹೇಳಿಕೆ ನೀಡಿದ್ದಾರೆ.
ಹೈದರಾಬಾದ್(ಜ.24): 2019ರ ಚುನಾವಣೆಗೂ ಮುನ್ನ ಕೇಂದ್ರ ಸರ್ಕಾರ ಎರಡು ಸಾವಿರ ರು. ನೋಟನ್ನು ನಿಷೇಧಿಸುವ ಸಾಧ್ಯತೆ ಇದೆ. ನವೆಂಬರ್ 8 ರಂದು ಪ್ರಧಾನಿ ನರೇಂದ್ರ ಮೋದಿ ಕೈಗೊಂಡ ನೋಟು ನಿಷೇಧ ಯೋಜನೆಯ ಸಲಹೆಗಾರ ಅನಿಲ್ ಬೊಕಿಲ್ ಇಂತಹ ಹೇಳಿಕೆ ನೀಡಿದ್ದಾರೆ.
ಹೈದಾಬಾದ್'ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅನಿಲ್ ಬೊಕಿಲ್ ಮಾತನಾಡಿದ್ದಾರೆ. ಈ ವೇಳೆ ಸರ್ಕಾರ 1 ಸಾವಿರ ರೂಪಾಯಿ ನಿಷೇಧಿಸಿದ್ದು ಹಾಗೂ 2ಸಾವಿರ ರೂಪಾಯಿ ಹೊಸ ನೋಟು ಬಿಡುಗಡೆ ಕಾರ್ಯಕ್ರಮ ಯಶಸ್ವಿಯಾಯಿತೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, 500 ಹಾಗೂ 1ಸಾವಿರ ರು ನೋಟು ನಿಷೇಧದ ನಂತರ ಉಂಟಾದ ತೊಂದರೆ ತಪ್ಪಿಸಲು ಮಾಡಿದ ತಾತ್ಕಾಲಿಕ ಪರಿಹಾರವಾಗಿದೆ. ಮುಂದಿನ ಲೋಕಸಭೆ ಚುನಾವಣೆಗೂ ಮುನ್ನ ಸರ್ಕಾರ 2ಸಾವಿರ ರು. ನೋಟು ನಿಷೇಧ ಮಾಡುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.
