ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಕಳೆದ ವರ್ಷ 1000 ಹಾಗೂ 500 ರೂ. ಮುಖಬೆಲೆಯ ನೋಟ್​ಗಳನ್ನು ಬ್ಯಾನ್​ ಮಾಡಿ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಈಗ ಮತ್ತೊಂದು ಬಾರಿ ಮೋದಿ ನೋಟ್​ ಬ್ಯಾನ್​ ಮಾಡುತ್ತಾರಾ ಅನ್ನೋ ಸಂಶಯ ಎದುರಾಗಿದೆ.

ನವದೆಹಲಿ (ಡಿ.20): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಕಳೆದ ವರ್ಷ 1000 ಹಾಗೂ 500 ರೂ. ಮುಖಬೆಲೆಯ ನೋಟ್​ಗಳನ್ನು ಬ್ಯಾನ್​ ಮಾಡಿ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಈಗ ಮತ್ತೊಂದು ಬಾರಿ ಮೋದಿ ನೋಟ್​ ಬ್ಯಾನ್​ ಮಾಡುತ್ತಾರಾ ಅನ್ನೋ ಸಂಶಯ ಎದುರಾಗಿದೆ.

ಎಸ್​ಬಿಐ ವಾರ್ಷಿಕ ವರದಿಯಲ್ಲಿ 2000 ರೂ. ನೋಟು ಮುದ್ರಣವನ್ನು ನಿಲ್ಲಿಸುವುದೇ ಒಳಿತು ಎಂದು ಸರ್ಕಾರಕ್ಕೆ ವರದಿ ಸಲ್ಲಿಸಿದೆ. ನೋಟ್​ ಬ್ಯಾನ್​ ನಂತರ ಮಾರ್ಚ್​’ವರೆಗೂ ದೇಶದಲ್ಲಿ 2000 ಮುಖಬೆಲೆ 3,501 ಬಿಲಿಯನ್ ​ಮೌಲ್ಯದ 2000 ನೋಟುಗಳು ಚಲಾವಣೆಗೆ ಬಂದಿವೆ. ನೋಟುಗಳ ದುಬಾರಿ ವೆಚ್ಚದಿಂದ ಕೇಂದ್ರ ಸರಕಾರ ಮತ್ತೊಮ್ಮೆ 2000 ಮುಖಬೆಲೆಯ ನೋಟ್​ಗಳನ್ನು ಬ್ಯಾನ್​ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಕೇಂದ್ರದ ಇತ್ತೀಚಿನ ವರದಿ ಪ್ರಕಾರ ಆರ್​ಬಿಐ 16957 ಮೌಲ್ಯದ 500 ಮುಖಬೆಲೆ ನೋಟು, 3654 ಮೌಲ್ಯದ 2000 ಮುಖಬೆಲೆ ನೋಟು ಚಲಾವಣೆ ತಂದಿತ್ತು. ಆದರೆ ಈ ಎಲ್ಲಾ ನೋಟುಗಳ ಮುದ್ರಣಕ್ಕೆ 15787 ಬಿಲಿಯನ್​ ವೆಚ್ಚವಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ಒಂದು ವೇಳೆ 2000 ರೂ. ಮುಖಬೆಲೆಯ ನೋಟುಗಳನ್ನ ಬ್ಯಾನ್​ ಮಾಡಬಹುದು ಅಥವಾ ಕಾಲಕ್ರಮೇಣ ಹಿಂಪಡೆಯುವ ಸಾಧ್ಯತೆ ಇದೆ. ಜೊತೆಯಲ್ಲೇ 2000 ರೂ. ಮುಖಬೆಲೆಯ ನೋಟುಗಳ ಮುದ್ರಣವನ್ನೂ ಸ್ಥಗಿತಗೊಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ.