ಕರ್ನಾಟಕ ಸೇರಿದಂತೆ ದೇಶಾದ್ಯಂತ ಅನೇಕ ಆಯುರ್ವೇದ ಕಾಲೇಜುಗಳಿಗೆ ಬೇಕಾಬಿಟ್ಟಿ ಪರವಾನಗಿ ನೀಡಲಾಗಿದ್ದು ಈ ಬಗ್ಗೆ ತನಿಖೆ ನಡೆಸಬೇಕೆಂದು ಸೆಂಟರ್‌ ಕೌನ್ಸಿಲ… ಆಫ್‌ ಇಂಡಿಯನ್‌ ಮೆಡಿಸಿನ್‌ನ ಕರ್ನಾಟಕದ ಸದಸ್ಯರಾದ ಡಾ. ಆನಂದ್‌ ಕ್ರಷಲ… ಮತ್ತು ಡಾ. ಮಹಾವೀರ್‌.ವಿ.ಹಾವೇರಿ ಒತ್ತಾಯಿಸಿದ್ದಾರೆ.

ನವದೆಹಲಿ : ಕರ್ನಾಟಕ ಸೇರಿದಂತೆ ದೇಶಾದ್ಯಂತ ಅನೇಕ ಆಯುರ್ವೇದ ಕಾಲೇಜುಗಳಿಗೆ ಬೇಕಾಬಿಟ್ಟಿ ಪರವಾನಗಿ ನೀಡಲಾಗಿದ್ದು ಈ ಬಗ್ಗೆ ತನಿಖೆ ನಡೆಸಬೇಕೆಂದು ಸೆಂಟರ್‌ ಕೌನ್ಸಿಲ… ಆಫ್‌ ಇಂಡಿಯನ್‌ ಮೆಡಿಸಿನ್‌ನ ಕರ್ನಾಟಕದ ಸದಸ್ಯರಾದ ಡಾ. ಆನಂದ್‌ ಕ್ರಷಲ… ಮತ್ತು ಡಾ. ಮಹಾವೀರ್‌.ವಿ.ಹಾವೇರಿ ಒತ್ತಾಯಿಸಿದ್ದಾರೆ.

ಈ ಬಗ್ಗೆ ದೆಹಲಿಯ ಮೆಟ್ರೊ ಪೊಲೀಸ್‌ ಹೊಟೇಲ್‌ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆಂಟ್ರಲ… ಕೌನ್ಸಿಲ… ಅಫ್‌ ಇಂಡಿಯನ್‌ ಮೆಡಿಸಿನ್‌ನ ಮುಖ್ಯಸ್ಥೆ ಡಾ.ವನಿತಾ ಮುರಳಿಕುಮಾರ್‌ ಅವರು ಈ ಅವ್ಯವಹಾರದಲ್ಲಿ ಭಾಗಿಯಾಗಿದ್ದು ಕನಿಷ್ಠ ಪಕ್ಷ 200 ಕೋಟಿ ರು.ಗಳ ಹಗರಣ ಇದಾಗಿದೆ ಎಂದು ಆರೋಪಿಸಿದರು.

ರಾಜ್ಯದಲ್ಲಿನ ಸರ್ಕಾರಿ ಮತ್ತು ಹಳೆಯ ಖಾಸಗಿ ಆಯುರ್ವೇದಿಕ್‌ ಕಾಲೇಜುಗಳಿಗೆ ನಿಯಮಬದ್ಧವಾಗಿಯೇ ಅನುಮತಿ ನೀಡಲಾಗಿದೆ. ಆದರೆ ಇತ್ತೀಚಿಗೆ ಮೂಲಸೌಕರ್ಯಗಳೇ ಇಲ್ಲದಿದ್ದರೂ ಕೆಲ ಕಾಲೇಜುಗಳಿಗೆ ನಿಯಮಬಾಹಿರವಾಗಿ ಅನುಮತಿ ನೀಡಲಾಗಿದೆ. ಕರ್ನಾಟಕದಲ್ಲಿ ಒಟ್ಟು 74 ಆಯುರ್ವೇದ ಕಾಲೇಜುಗಳಿವೆ. ದೇಶಾದ್ಯಂತ ಒಟ್ಟು 450 ಆಯುರ್ವೇದ ಕಾಲೇಜುಗಳಿವೆ. 2012ರಲ್ಲಿ ಕೇವಲ 270 ಆಯುರ್ವೇದ ಕಾಲೇಜ್‌ಗಳಿದ್ದವು. ಕೇವಲ 1 ವಾರದೊಳಗೆ ಪರಿಶೀಲಿಸಿ ಈ ಕಾಲೇಜ್‌ಗಳಿಗೆ ಅನುಮತಿ ನೀಡಲಾಗಿದೆ. ಈ ಪರಿಶೀಲನಾ ಪ್ರಕ್ರಿಯೆಗೆ ಕನಿಷ್ಠ ಪಕ್ಷ 5-6 ತಿಂಗಳು ಬೇಕಿತ್ತು ಎಂದು ಆರೋಪಿಸಿದರು.

ಡಾ.ವನೀತಾ ಮುರಳೀಧರ್‌ ಅವರೊಂದಿಗೆ ಆಯುಷ್‌ ಇಲಾಖೆಯ ಉನ್ನತ ಅಧಿಕಾರಿಗಳು ಕೂಡ ಭಾಗಿಯಾಗಿದ್ದಾರೆ. ವನಿತಾ ಅವರ ಅಧಿಕಾರವಾಧಿ ಮುಗಿದಿದ್ದು ಅವರನ್ನು ಸರ್ಕಾರ ಪದಚ್ಯುತಗೊಳಿಸಬೇಕು. ಹಾಗೆಯೇ ಇಡಿ ಪ್ರಕರಣದ ಬಗ್ಗೆ ತನಿಖೆ ನಡೆಸಬೇಕು. ಆಯುರ್ವೇದ ಶಿಕ್ಷಣದ ಗುಣಮಟ್ಟವನ್ನು ಕಾಪಾಡಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸೆಂಟರ್‌ ಕೌನ್ಸಿಲ… ಆಫ್‌ ಇಂಡಿಯನ್‌ ಮೆಡಿಸಿನ್‌ನ ಮಾಜಿ ಅಧ್ಯಕ್ಷ ಡಾ.ವೇದಪ್ರಕಾಶ್‌ ತ್ಯಾಗಿ ಮಾತನಾಡಿದರು.