Asianet Suvarna News Asianet Suvarna News

ಗೂಗಲ್ ನಲ್ಲಿ ಕೆಲ್ಸ ಗಿಟ್ಟಿಸೋದು ಸುಲಭ ಅಲ್ಲ: ಏನೆಲ್ಲಾ ಪ್ರಶ್ನೆಗಳಿವೆ ನೋಡಿ..!

ಗೂಗಲ್ ನಲ್ಲಿ ಕೆಲಸ ಮಾಡುವುದು ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ?. ವಿಶ್ವದ ಅತ್ಯಂತ ಪ್ರತಿಷ್ಠಿತ ಕಂಪನಿಗಳಲ್ಲಿ ಅಗ್ರಸ್ಥಾನ ಗಳಿಸಿರುವ ಗೂಗಲ್ ನಲ್ಲಿ ಕೆಲಸ ಗಿಟ್ಟಿಸುವುದು ಬಹುತೇಕರ ಕನಸು ಹೌದು. ಆದರೆ ಗೂಗಲ್ ನಲ್ಲಿ ಕೆಲಸ ಸಿಗುವುದು ಅಷ್ಟು ಸುಲಭದ ಮಾತಲ್ಲ.

20 toughest questions from Google job interviews

ಬೆಂಗಳೂರು(ಮೇ 31): ಗೂಗಲ್ ನಲ್ಲಿ ಕೆಲಸ ಮಾಡುವುದು ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ?. ವಿಶ್ವದ ಅತ್ಯಂತ ಪ್ರತಿಷ್ಠಿತ ಕಂಪನಿಗಳಲ್ಲಿ ಅಗ್ರಸ್ಥಾನ ಗಳಿಸಿರುವ ಗೂಗಲ್ ನಲ್ಲಿ ಕೆಲಸ ಗಿಟ್ಟಿಸುವುದು ಬಹುತೇಕರ ಕನಸು ಹೌದು. 

ಆದರೆ ಗೂಗಲ್ ನಲ್ಲಿ ಕೆಲಸ ಸಿಗುವುದು ಅಷ್ಟು ಸುಲಭದ ಮಾತಲ್ಲ. ಅಭ್ಯರ್ಥಿಯ ಸಾಮರ್ಥ್ಯವನ್ನು ಅಳೆದು ತೂಗಿದ ನಂತರವೇ ಗೂಗಲ್ ತನ್ನ ಉದ್ಯೋಗದ ಬಾಗಿಲನ್ನು ತೆರೆಯುತ್ತದೆ. ಅದರಲ್ಲೂ ಸಂದರ್ಶನದ ಸಂದರ್ಭದಲ್ಲಿ ಅತ್ಯಂತ ಕಠಿಣ ಪ್ರಶ್ನೆಗಳ ಸರಮಾಲೆಯನ್ನೇ ಅಭ್ಯರ್ಥಿಯ ಮುಂದಿಡುತ್ತದೆ ಗೂಗಲ್. ಹಾಗಾದರೆ ಸಂದರ್ಶನದ  ಸಮಯದಲ್ಲಿ ಗೂಗಲ್ ಕೇಳಬಹುದಾದ ಪ್ರಮುಖ ಪ್ರಶ್ನೆಗಳನ್ನು ನೋಡುವುದಾದರೆ..

ಸಂದರ್ಶಕ-
1. HTML 5 ನ ಮಹತ್ವವನ್ನು ಲ್ಯಾರಿ ಪೇಜ್ ಮತ್ತು ನನ್ನ ಅಜ್ಜಿಗೆ ಹೇಗೆ ವಿವರಿಸುವಿರಿ?
    -2016ರಲ್ಲಿ ಕೇಳಿದ ಪ್ರಶ್ನೆ
2. 1 ಶತಕೋಟಿ ಯುಎಸ್ ಡಾಲರ್ ಮತ್ತು ಒಂದು ಬಾಹ್ಯಾಕಾಶ ನೌಕೆ ನೀಡಿದ ಮಾನವಕುಲದ ಅತಿದೊಡ್ಡ ಬಿಕ್ಕಟ್ಟನ್ನು ನೀವು ಹೇಗೆ ಪರಿಹರಿಸಬಹುದು?
    -2015ರಲ್ಲಿ ಕೇಳಿದ ಪ್ರಶ್ನೆ
3. ಗೇಟ್ ವೇ ಆಫ್ ಇಂಡಿಯಾ [ಮುಂಬೈ] ಮತ್ತು ಇಂಡಿಯಾ ಗೇಟ್[ದೆಹಲಿ] ಕುರಿತು ಗೂಗಲ್ ನಲ್ಲಿ ಸರ್ಚ್ ಮಾಡುತ್ತಿರುವ ವ್ಯಕ್ತಿಗೆ ಮ್ಯಾಪ್ ಮೂಲಕ ಹೇಗೆ ಸಹಾಯ ಮಾಡುವಿರಿ?
ಸಾಫ್ಟವೇರ್ ಇಂಜಿನಿಯರ್ ಗೆ ಕೇಳಿದ ಪ್ರಶ್ನೆ
4. ನಾಲ್ಕು ವರ್ಷಗಳ ಅವಧಿಯಲ್ಲಿ ಕಾಲೇಜು ಮುಗಿಸಿ ಪದವಿ ಜೊತೆಗೆ ಕೆಲಸ ಗಿಟ್ಟಿಸುವ ಅಮೆರಿಕದ ಯುವಕರ ಸಂಖ್ಯೆ ಎಷ್ಟು?
ಪ್ರೊಡಕ್ಟ್ ಮ್ಯಾನೇಜರ್ ಪೋಸ್ಟ್ ಹುದ್ದೆಗಾಗಿ ಕೇಳಿದ ಪ್ರಶ್ನೆ
5. ಬ್ಯಾಂಕ್ ಒಂದರ ಡಾಟಾಬೇಸ್ ನಿಮಗೆ ಸಿಕ್ಕರೆ ಹಿರಿಯ ನಾಗರಿಕರಿಗಾಗಿ ಎಟಿಎಂ ವ್ಯವಸ್ಥೆ ಸುಧಾರಿಸಲು ಏನು ಕ್ರಮ ಕೈಗೊಳ್ಳುವಿರಿ?
  -2015ರಲ್ಲಿ ಕೇಳಿದ ಪ್ರಶ್ನೆ
6. ಸ್ಯಾನ್ ಫ್ರಾನ್ಸಿಸ್ಕೋದ ನಿರ್ಗತಿಕ ಸಮಸ್ಯೆ ಹೇಗೆ ಪರಿಹರಿಸುವಿರಿ?
ಪ್ರೊಡಕ್ಟ್ ಮ್ಯಾನೇಜರ್ ಪೋಸ್ಟ್ ಹುದ್ದೆಗಾಗಿ ಕೇಳಿದ ಪ್ರಶ್ನೆ
7.  ಒಬ್ಬ ವ್ಯಕ್ತಿ ತನ್ನ ಕಾರನ್ನು ಹೊಟೇಲ್ ಗೆ ನುಗ್ಗಿಸಿ ತನ್ನ ಸಂಪತ್ತನ್ನೇಲ್ಲಾ ಕಳೆದುಕೊಂಡ. ಏನಾಗಿರಬಹುದು?
ಸಾಫ್ಟವೇರ್ ಇಂಜಿನಿಯರ್ ಗೆ ಕೇಳಿದ ಪ್ರಶ್ನೆ
8. ಜಗತ್ತಿನ ಯಾವುದೇ ಭಾಗದಲ್ಲಿ ಗೂಗಲ್ ಕಚೇರಿ ತೆರೆದು, ಅಲ್ಲಿ ಸಿಬ್ಬಂದಿಗೆ ಯಾವ ರೀತಿ ಪರಿಹಾರ ವಿತರಿಸುತ್ತೀರಿ?
9. ಒಂದು ನಿರ್ದಿಷ್ಟ ಕಟ್ಟಡಕ್ಕೆ ಸ್ಥಳಾಂತರಿಸುವಿಕೆಯ ಯೋಜನೆ ಹೇಗೆ ಮಾಡುವಿರಿ?
    -2014ರಲ್ಲಿ ಕೇಳಿದ ಪ್ರಶ್ನೆ
10. ಒಂದು ನಾಣ್ಯವನ್ನು ಸಾವಿರ ಬಾರಿ ಮೇಲೆಕ್ಕೆಸೆದಾಗ 560 ಬಾರಿ ಅದು ಹೆಡ್ ಆಗಿದ್ದರೆ ಆ ನಾಣ್ಯ ಪಕ್ಷಪಾತಿ ಎಂದು ನಿರ್ಧರಿಸುವಿರಾ?
     -2105ರಲ್ಲಿ ಕೇಳಿದ ಪ್ರಶ್ನೆ
11. ಗೂಗಲ್, ಜಿ-ಮೇಲ್ ಅಕೌಂಟ್ ತೆರೆಯುವಾಗ ಜನ ತಮ್ಮ ನಿಜನಾಮವನ್ನೇ ಬಳಸಬೇಕು ಎಂಬ ನಿಯಮ ಸರಿಯೇ?
ಅಡ್ಮಿನಿಸ್ಟ್ರೇಟಿವ್ ಅಸಿಸ್ಟಂಟ್ ಹುದ್ದೆಗೆ ಕೇಳಿದ ಪ್ರಶ್ನೆ
12. ನೀವು ಕಡಲುಗಳ್ಳರ ಹಡಗಿನ ನಾಯಕರಾಗಿದ್ದೀರಿ, ಮತ್ತು ನಿಮ್ಮ ತಂಡ ಚಿನ್ನವನ್ನು ಹೇಗೆ ವಿಭಾಗಿಸಲ್ಪಡಬೇಕು ಎಂಬುದರ ಬಗ್ಗೆ ಮತ ಚಲಾಯಿಸುವಂತೆ ನೀವು ಹೇಳುತ್ತೀರಿ. ಅರ್ಧದಷ್ಟು ಕಡಲ್ಗಳ್ಳರು ನಿಮ್ಮ ಯೋಜನೆ ಒಪ್ಪಿದರೆ ನೀವು ಸಾಯುತ್ತೀರಿ. ನೀವು ಕೊಳ್ಳುವಿಕೆಯ ಉತ್ತಮ ಪಾಲನ್ನು ಪಡೆಯುವ ರೀತಿಯಲ್ಲಿ ಹೇಗೆ ಯೋಜನೆ ರೂಪಿಸುತ್ತೀರಿ?
ಇಂಜಿನಿಯರಿಂಗ್ ಮ್ಯಾನೇಜರ್ ಹುದ್ದೆಗೆ ಕೇಳಿದ ಪ್ರಶ್ನೆ
13. ಹೇಸ್ಟಾಕ್ನಲ್ಲಿ ಸೂಜಿಯನ್ನು ಕಂಡುಹಿಡಿಯಲು ನೀವು ಎಷ್ಟು ರೀತಿಯಲ್ಲಿ ಯೋಚಿಸಬಹುದು?
    -2014ರಲ್ಲಿ ಕೇಳಿದ ಪ್ರಶ್ನೆ
14. ನಿಮ್ಮ ಜೀವಿತಾವಧಿಯವರೆಗೆ ನೀವು ನಿಮ್ಮ ಕೋಣೆಯೊಳಗೆ ಕಾಲಿಟ್ಟಾಗ ಪ್ರತಿ ಬಾರಿಯೂ ಒಂದೇ ಹಾಡನ್ನು ಆರಿಸಿಕೊಳ್ಳಲು ನಿಮಗೆ ಸಾಧ್ಯವಾದರೆ ಏನು ಮಾಡುವಿರಿ?
15. 64 ರಲ್ಲಿ ಸಂಖ್ಯೆ 2ರ ಮಹತ್ವ ಏನು?
16. ಗಡಿಯಾರದ ಕೈಗಳು ದಿನಕ್ಕೆ ಎಷ್ಟು ಬಾರಿ ಹರಡುತ್ತವೆ?
17. ಒಂದು ಕೋಲನ್ನು 3 ತುಂಡುಗಳಾಗಿ ಮುರಿದು ತ್ರಿಕೋನವೊಂದನ್ನು ರೂಪಿಸುವ ಸಂಭವನೀಯತೆ ಏನು?
18. ಜಿ-ಮೇಲ್ ನ್ನು ಬಳಸಲು ಬಳಕೆದಾರರಿಗೆ 1 ಯುಎಸ್ ಡಾಲರ್ ಮೊತ್ತ ನಿಗದಿಪಡಿಸಲು ನಿಮ್ಮ ಅಭಿಪ್ರಾಯವೇನು?
19. ಅಮೆರಿಕದಲ್ಲಿ ಪ್ರತಿವರ್ಷ ಎಷ್ಟು ಕೇಶವಿನ್ಯಾಸಗಳಾಗುತ್ತವೆ? 

ಹೀಗೆ ಚಿತ್ರ ವಿಚಿತ್ರ ಪ್ರಶ್ನೆಗಳ ಮೂಲಕ ಗೂಗಲ್ ನಿಮ್ಮನ್ನು ಪರೀಕ್ಷೆ ಮಾಡುತ್ತದೆ. ಇಂತಹ ಕಠಿಣ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿದ ಅಭ್ಯರ್ಥಿ ಮಾತ್ರ ಗೂಗಲ್ ಕಚೇರಿಯಲ್ಲಿ ಕಾಲಿಡಲು ಸಾಧ್ಯ.

Follow Us:
Download App:
  • android
  • ios