ವಿದ್ಯಾರ್ಥಿಗಳ ದಾಖಲಾತಿ ತೀರಾ ಕಡಿಮೆ ಇರುವ ಕರ್ನಾಟಕದ 20 ಸೇರಿ ದೇಶಾದ್ಯಂತ ಇರುವ 300 ಎಂಜಿನಿಯರಿಂಗ್ ಕಾಲೇಜುಗಳನ್ನು ಮುಚ್ಚಲು ಕೇಂದ್ರ ಸರ್ಕಾರ ಶೀಘ್ರ ಆದೇಶ ಹೊರಡಿಸುವ ಸಾಧ್ಯತೆ ಇದೆ.
ನವದೆಹಲಿ: ವಿದ್ಯಾರ್ಥಿಗಳ ದಾಖಲಾತಿ ತೀರಾ ಕಡಿಮೆ ಇರುವ ಕರ್ನಾಟಕದ 20 ಸೇರಿ ದೇಶಾದ್ಯಂತ ಇರುವ 300 ಎಂಜಿನಿಯರಿಂಗ್ ಕಾಲೇಜುಗಳನ್ನು ಮುಚ್ಚಲು ಕೇಂದ್ರ ಸರ್ಕಾರ ಶೀಘ್ರ ಆದೇಶ ಹೊರಡಿಸುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ 2018-19ರ ಶೈಕ್ಷಣಿಕ ಅವಧಿಗೆ ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಕೊಳ್ಳದಂತೆ ಈ ಕಾಲೇಜುಗಳಿಗೆ ಸೂಚಿಸುವ ನಿರೀಕ್ಷೆಯಿದೆ.
ಈ ಸಂಸ್ಥೆಗಳಲ್ಲಿ ಸತತ 5ವರ್ಷಗಳಿಂದ ಒಟ್ಟು ಸಾಮರ್ಥ್ಯದ ಪೈಕಿ ಶೇ.30ಕ್ಕೂ ಕಡಿಮೆ ವಿದ್ಯಾರ್ಥಿಗಳು ಮಾತ್ರವೇ ಪ್ರವೇಶ ಪಡೆಯುತ್ತಿದ್ದಾರೆ. ಈ ಪೈಕಿ 150 ಶಿಕ್ಷಣ ಸಂಸ್ಥೆಗಳಲ್ಲಿ ಶೇ.20ಕ್ಕೂ ಕಡಿಮೆ ದಾಖಲಾತಿಯಿದೆ. ಹಾಗಾಗಿ, ಅಂಥ ಕಾಲೇಜುಗಳಲ್ಲಿ ಶಿಕ್ಷಣ ನಿಲ್ಲಿಸಲು ಶಿಫಾರಸು ಮಾಡುವ ಸಾಧ್ಯತೆ ಇದೆ.
ಅದರ ಬದಲು ಈ ಕಾಲೇಜುಗಳನ್ನು ವಿಜ್ಞಾನ ಅಥವಾ ವೃತ್ತಿಪರ ಶಿಕ್ಷಣ ಸಂಸ್ಥೆಗಳಾಗಿ ಮಾರ್ಪಾಡಿಸಿಕೊಳ್ಳುವಂತೆ ಸಲಹೆ ನೀಡುವ ಸಾಧ್ಯತೆ ಇದೆ. ದೇಶಾದ್ಯಂತ 3000 ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ 13.56 ಲಕ್ಷ ಸೀಟು ಲಭ್ಯವಿದೆ. 800ಕ್ಕೂ ಅಧಿಕ ಕಾಲೇಜುಗಳಲ್ಲಿ ಶೇ.50ಕ್ಕೂ ಕಡಿಮೆ ವಿದ್ಯಾರ್ಥಿಗಳ ಪ್ರವೇಶಾತಿಯಿದೆ.
