ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಶಹಬಾಜ್ ಶರೀಫ್ ಮನೆ ಸಮೀಪ ಆತ್ಮಹತ್ಯಾ ಸ್ಫೋಟ ಸಂಭವಿಸಿದ್ದು ಪೊಲೀಸರು ಸೇರಿದಂತೆ ಕನಿಷ್ಠ 20 ಮಂದಿ ಮೃತಪಟ್ಟಿದ್ದು, 30 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಲಾಹೋರ್ (ಜು.24): ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಶಹಬಾಜ್ ಶರೀಫ್ ಮನೆ ಸಮೀಪ ಆತ್ಮಹತ್ಯಾ ಸ್ಫೋಟ ಸಂಭವಿಸಿದ್ದು ಪೊಲೀಸರು ಸೇರಿದಂತೆ ಕನಿಷ್ಠ 20 ಮಂದಿ ಮೃತಪಟ್ಟಿದ್ದು, 30 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪೊಲೀಸರನ್ನೇ ಗುರಿಯಾಗಿಟ್ಟುಕೊಂಡು ಆತ್ಮಹತ್ಯಾ ದಾಳಿ ನಡೆಸಲಾಗಿದೆ ಎಂದು ಲಾಹೋರ್ ಪೊಲೀಸರು ಹೇಳಿದ್ದಾರೆ.

ಮುಖ್ಯಮಂತ್ರಿ ಮನೆ ಸಮೀಪವಿರುವ ರ್ಫಾ ಕರೀಮ್ ಟವರ್ ಸುತ್ತಮುತ್ತ ಪೊಲೀಸರು ಹಾಗೂ ಲಾಹೋರ್ ಪ್ರಾಧಿಕಾರದ ಅಧಿಕಾರಿಗಳು ಸ್ಥಳದಲ್ಲಿ ಅತಿಕ್ರಮ ತೆರವುಗೊಳಿಸುತ್ತಿದ್ದ ವೇಳೆ ಬಾಂಬ್ ಸ್ಪೋಟ ಸಂಭವಿಸಿದೆ. ಗಾಯಗೊಂಡವರ ಸ್ಥಿತಿ ಗಂಭಿರವಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

(ಸಾಂದರ್ಭಿಕ ಚಿತ್ರ)