ಒಂದೇ ಟ್ರ್ಯಾಕ್’ನಲ್ಲಿ ಆಗಮಿಸಿದ 2 ರೈಲುಗಳು – ತಪ್ಪಿತು ಭಾರೀ ದುರಂತ

2 Train In One Track
Highlights

ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ಸಿಗ್ನಲ್ ದೋಷದಿಂದಾಗಿ ಎರಡು ರೈಲುಗಳು ಒಂದೇ ಟ್ರ್ಯಾಕಿನಲ್ಲಿ ಆಗಮಿಸಿದರೂ ಕೊನೇ ಕ್ಷಣದಲ್ಲಿ ಸಿಬ್ಬಂದಿ ಸಮಯಪ್ರಜ್ಞೆಯಂದಾಗಿ ದುರಂತ ತಪ್ಪಿದ ಘಟನೆ ಶುಕ್ರವಾರ ರಾತ್ರಿ ಸಂಭವಿಸಿದೆ.

ಹೊಳೆನರಸೀಪುರ: ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ಸಿಗ್ನಲ್ ದೋಷದಿಂದಾಗಿ ಎರಡು ರೈಲುಗಳು ಒಂದೇ ಟ್ರ್ಯಾಕಿನಲ್ಲಿ ಆಗಮಿಸಿದರೂ ಕೊನೇ ಕ್ಷಣದಲ್ಲಿ ಸಿಬ್ಬಂದಿ ಸಮಯಪ್ರಜ್ಞೆಯಂದಾಗಿ ದುರಂತ ತಪ್ಪಿದ ಘಟನೆ ಶುಕ್ರವಾರ ರಾತ್ರಿ ಸಂಭವಿಸಿದೆ.

ತಾಳಗುಪ್ಪದಿಂದ ಮೈಸೂರಿಗೆ ಸಾಗಬೇಕಿದ್ದ ಇಂಟರ್‌ಸಿಟಿ ರೈಲು ಮತ್ತು ಮೈಸೂರಿನಿಂದ ಅರಸೀಕೆರೆಗೆ ಹೋಗುವ ಪ್ಯಾಸೆಂಜರ್ ರೈಲುಗಳಿಗೆ ನಗರದ ರೈಲು ನಿಲ್ದಾಣದಲ್ಲಿ ಕ್ರಾಸಿಂಗ್ ವ್ಯವಸ್ಥೆ ಇತ್ತು. ಇಂಟರ್‌ಸಿಟಿ ಮೊದಲ ಟ್ರ್ಯಾಕ್‌ನಲ್ಲೂ, ಪ್ಯಾಸೆಂಜರ್ ರೈಲು 2ನೇ ಟ್ರ್ಯಾಕ್‌ನಲ್ಲೂ

ಆಗಮಿಸಬೇಕಿತ್ತು. ಆದರೆ ಎರಡೂ ರೈಲು ಒಂದೇ ಟ್ರ್ಯಾಕ್‌ನಲ್ಲಿ ಆಗಮಿಸಿ ಆತಂಕ ನಿರ್ಮಾಣವಾಗಿತ್ತು. ತಕ್ಷಣ ಇದನ್ನು ಗಮಿಸಿದ ಸಿಬ್ಬಂದಿ ನಿಲ್ದಾಣದ ಸಮೀಪವೇ ಎರಡೂ ರೈಲನ್ನು ನಿಲ್ಲಿಸಿದ್ದಾರೆ.

ಘಟನೆ ಹಿನ್ನೆಲೆಯಲ್ಲಿ 1 ಗಂಟೆ ಕಾಲ ರೈಲು ಸಂಚಾರ ವಿಳಂಬವಾಯಿತು.

loader