ತಂದೆಯ ಸಾವಿನ ವೇಳೆ ಪರೀಕ್ಷೆ ಎದುರಿಸಿ ಆತ್ಮಸ್ಥೈರ್ಯ ತೋರಿದ ಸಹೋದರಿಯರು

First Published 15, Mar 2018, 3:43 PM IST
2 sisters write HSC paper hours after father dies
Highlights

ಮಹಾರಾಷ್ಟ್ರದ ತುಳಸರಿ ಪ್ರದೇಶದಲ್ಲಿ ಇಬ್ಬರು ಸಹೋದರಿಯರು ತಮ್ಮ ತಂದೆ ಮೃತಪಟ್ಟಾಗಲೇ ಹೋಗಿ ಪರೀಕ್ಷೆ ಬರೆದು ಬಂದಿದ್ದಾರೆ.  ತಂದೆ ಮೃತಪಟ್ಟು ಅಂತ್ಯಸಂಸ್ಕಾರ ನಡೆಸಿದ  ಒಂದೇ ಗಂಟೆಯಲ್ಲಿ ಹೋಗಿ ಸಹೋದರಿಯರಿಬ್ಬರೂ ಪರೀಕ್ಷೆಗೆ ಹಾಜರಾಗಿದ್ದಾರೆ.

ಮುಂಬೈ : ಮಹಾರಾಷ್ಟ್ರದ ತುಳಸರಿ ಪ್ರದೇಶದಲ್ಲಿ ಇಬ್ಬರು ಸಹೋದರಿಯರು ತಮ್ಮ ತಂದೆ ಮೃತಪಟ್ಟಾಗಲೇ ಹೋಗಿ ಪರೀಕ್ಷೆ ಬರೆದು ಬಂದಿದ್ದಾರೆ.  ತಂದೆ ಮೃತಪಟ್ಟು ಅಂತ್ಯಸಂಸ್ಕಾರ ನಡೆಸಿದ  ಒಂದೇ ಗಂಟೆಯಲ್ಲಿ ಹೋಗಿ ಸಹೋದರಿಯರಿಬ್ಬರೂ ಪರೀಕ್ಷೆಗೆ ಹಾಜರಾಗಿದ್ದಾರೆ.

ವಿನೋದ್ ಚೌಧರಿ ಎಂಬ ರೈತ  ಮೃತಪಟ್ಟಿದ್ದರು.  ಅವರ ಪುತ್ರಿಯರಾದ ಪೂಜಾ ಹಾಗೂ ದೀಪಿಕಾ ಈ ದುಃಖದ ನಡುವೆಯೇ ಪರೀಕ್ಷೆಗೆ ಹಾಜರಾಗಿದ್ದಾರೆ. ವಿದ್ಯಾರ್ಥಿನಿಯರಿಬ್ಬರೂ ಪರೀಕ್ಷೆಗೆ ಹಾಜರಾಗಿದ್ದು ಎಲ್ಲಾ ಶಿಕ್ಷಕರು ಗ್ರಾಮಸ್ಥರೂ ಕೂಡ  ಮನೆಗೆ ಆಗಮಿಸಿ ಅವರಿಗೆ ಸಾಂತ್ವನ ಹೇಳಿದ್ದು, ದುಃಖದ ನಡುವೆಯೇ ಪರೀಕ್ಷೆ  ಬರೆದ  ಇಬ್ಬರು ಸಹೋದರಿಯರ ಆತ್ಮಸ್ಥೈರ್ಯವನ್ನು ಕೊಂಡಾಡಿದ್ದಾರೆ.  

loader