ಚಾಲಕನ ನಿರ್ಲಕ್ಷದಿಂದ ರಸ್ತೆ ಪಕ್ಕ ಬಸ್ಗಾಗಿ ಕಾಯುತ್ತಿದ್ದ ಮೂವರು ಯಾತ್ರಿಕರ ಮೇಲೆ ಆಲ್ಟೋ ಕಾರು ಹರಿದು ಇಬ್ಬರು ಯಾತ್ರಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದು ಮತ್ತೋರ್ವ ಗಂಭೀರ ಗಾಯಗೊಂಡಿದ್ದಾರೆ. ಎಂ.ಕೆ. ಹುಬ್ಬಳಿಯ ಮಲಪ್ರಭಾ ಸೇತುವೆ ಬಳಿ ಈ ಘಟನೆ ನಡೆದಿದೆ.
ಬೆಳಗಾವಿ (ಮಾ.27): ಚಾಲಕನ ನಿರ್ಲಕ್ಷದಿಂದ ರಸ್ತೆ ಪಕ್ಕ ಬಸ್ಗಾಗಿ ಕಾಯುತ್ತಿದ್ದ ಮೂವರು ಯಾತ್ರಿಕರ ಮೇಲೆ ಆಲ್ಟೋ ಕಾರು ಹರಿದು ಇಬ್ಬರು ಯಾತ್ರಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದು ಮತ್ತೋರ್ವ ಗಂಭೀರ ಗಾಯಗೊಂಡಿದ್ದಾರೆ. ಎಂ.ಕೆ. ಹುಬ್ಬಳಿಯ ಮಲಪ್ರಭಾ ಸೇತುವೆ ಬಳಿ ಈ ಘಟನೆ ನಡೆದಿದೆ.
ರತ್ನವ್ವ ಶಿವಬಸಪ್ಪ (55) ಹಾಗೂ ನಾಲ್ಕು ವರ್ಷದ ಮಗು ಸಾವನ್ನಪ್ಪಿರುವ ಮೃ ದುರ್ದೈವಿಗಳು. ಗಂಭೀರ ಗಾಯಗೊಂಡ ಗೌರವ್ವನನ್ನು ಬೆಳಗಾವಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಗಂಗಾಂಬಿಕೆ ದೇವಿ ದರ್ಶನ ಪಡೆದು ಬಸ್ಗಾಗಿ ಕಾಯುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ಕಿತ್ತೂರು ಠಾಣೆಯ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
