ನವದೆಹಲಿ(ಅ.03): ಕರಾಚಿಯಿಂದ ಹೊರಟಿರುವ 2 ಅನುಮಾನಾಸ್ಪದ ಬೋಟ್`ಗಳು ಭಾರತದೆಡಗೆ ಧಾವಿಸುತ್ತಿರುವ ಬಗ್ಗೆ ಗುಪ್ತಚರ ಸಂಸ್ಥೆ ಮಾಹಿತಿ ನೀಡಿದೆ. ಈ ಬೋಟ್`ಗಳು ಗುಜರಾತ್ ಅಥವಾ ಮಹಾರಾಷ್ಟ್ರ ಕರಾವಳಿಗೆ ಬರಬಹುದು ಎಂದು ಹೇಳಲಾಗಿದೆ.
ನಿನ್ನೆಯಷ್ಟೇ ಗುಜರಾತ್ ತೀರದಲ್ಲಿ ಪಾಕಿಸ್ತಾನ ಬೋಟ್ ಒಂದು ಪತ್ತೆಯಾದ ಬೆನ್ನಲ್ಲೇ ಮತ್ತೆರಡು ಬೋಟ್`ಗಳು ಧಾವಿಸುತ್ತಿರುವ ಬಗ್ಗೆ ಗುಪ್ತಚರ ಸಂಸ್ಥೆ ಮಾಹಿತಿ ರವಾನಿಸಿದ್ದು, ಕರಾವಳಿ ಕಾವಲು ಪಡೆ ಮತ್ತು ನೌಕಾ ಪಡೆ ಕಟ್ಟೆಚ್ಚರ ವಹಿಸಿದೆ. ಬೋಟ್`ಗಳ ಚಲಿಸುತ್ತಿರುವ ದಿಕ್ಕಿನ ಆಧಾರದ ಮೇಲೆ ಮಾಹಿತಿ ಕಲೆ ಹಾಕಲಾಗಿದೆ.
