Asianet Suvarna News Asianet Suvarna News

ಶೇ.90 ರಷ್ಟು ಎಟಿಎಂಗಳು ಹೊಸನೋಟು ಬಿಡುಗಡೆಗೆ ಸಜ್ಜು

ಹೊಸ ನೋಟುಗಳನ್ನು ಹೊರಹಾಕಲು ದೇಶಾದ್ಯಂತ ಇರುವ ಸುಮಾರು 2 ಲಕ್ಷ ಎಟಿಎಂಗಳನ್ನು ಮರುಹೊಂದಾಣಿಕೆ ಮಾಡಲಾಗಿದೆ ಎಂದು ನ್ಯಾಷನಲ್ ಕ್ಯಾಶ್ ರಿಜಿಸ್ಟರ್ ಹೇಳಿದೆ.

2 lakh ATMs recalibrated to dispense new notes says ATM manufacturer NCR Corporation  2 lakh ATMs recalibrated to dispense new notes says ATM manufacturer NCR Corporation

ಮುಂಬೈ (ಡಿ.01): ಹೊಸ ನೋಟುಗಳನ್ನು ಹೊರಹಾಕಲು ದೇಶಾದ್ಯಂತ ಇರುವ ಸುಮಾರು 2 ಲಕ್ಷ ಎಟಿಎಂಗಳನ್ನು ಮರುಹೊಂದಾಣಿಕೆ ಮಾಡಲಾಗಿದೆ ಎಂದು ನ್ಯಾಷನಲ್ ಕ್ಯಾಶ್ ರಿಜಿಸ್ಟರ್ ಹೇಳಿದೆ.

ಯೋಜನೆ ಪ್ರಕಾರ ನಿನ್ನೆಯೇ ಎಲ್ಲಾ ಎಟಿಎಂಗಳು ಕಾರ್ಯಪ್ರವೃತ್ತವಾಗುವುದಕ್ಕೆ ಸಿದ್ಧವಾಗಿರಬೇಕಿತ್ತು. ಆದರೆ ಶೇ.90 ರಷ್ಟು ಎಟಿಎಂಗಳನ್ನು ಮರುಹೊಂದಾಣಿಕೆ ಮಾಡಲಾಗಿದೆ.

ಸರ್ಕಾರ 500 ಹಾಗೂ 1000 ರೂ. ಮುಖಬೆಲೆಯ ನೋಟುಗಳನ್ನು ಹಿಂತೆಗೆದುಕೊಂಡ ಬಳಿಕ ನ.30 ರೊಳಗೆ ಎಲ್ಲಾ ಎಟಿಎಂಗಳನ್ನು ಮರುಹೊಂದಾಣಿಕೆ ಮಾಡಲು ಗಡುವು ನೀಡಲಾಗಿತ್ತು. ಶೇ.90 ರಷ್ಟು ಅಂದರೆ

ಅಂದಾಜು 2 ಲಕ್ಷ ಎಟಿಎಂಗಳನ್ನು ಮರುಹೊಂದಾಣಿಕೆ ಮಾಡಲಾಗಿದ್ದು ಹೊಸ 500 ಹಾಗೂ 2000 ನೋಟುಗಳನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ ಎಂದು ನ್ಯಾಷನಲ್ ಕ್ಯಾಷ್ ರಿಜಿಸ್ಟರ್ ಹೇಳಿದೆ.  

Latest Videos
Follow Us:
Download App:
  • android
  • ios