ವಿಶ್ವದ ಅತ್ಯಂತ ಎತ್ತರದ ಶಿಖರ ಮೌಂಟ್ ಎವರೆಸ್ಟ್| ಎವರೆಸ್ಟ್‌ನಲ್ಲಿ ಟ್ರಾಫಿಕ್ ಜಾಮ್ ಫೋಟೋ ವೈರಲ್| ಕಡಿದಾದ ಕಣಿವೆಯಲ್ಲಿ ಜನರು ಸಾಲುಗಟ್ಟಿ ಶಿಖರವನ್ನು ಏರುತ್ತಿರುವ ದೃಶ್ಯ ವೈರಲ್!
ನವದೆಹಲಿ[ಮೇ.26]: ಮೇ 22ರಂದು ವಿಶ್ವದ ಅತ್ಯಂತ ಎತ್ತರದ ಶಿಖರ ಮೌಂಟ್ ಎವರೆಸ್ಟ್ ಅನ್ನು ಏರುವಾಗ ಜನಜಂಗುಳಿ ಉಂಟಾದ ಚಿತ್ರವೊಂದು ಇದೀಗ ವೈರಲ್ ಆಗಿದೆ. ಅಂದು ಶಿಖರಾರೋಹಿಗಳ ಪೈಕಿ ಒಬ್ಬರಾದ ನಿರ್ಮಲ್ ಪುರ್ಜಾ ಎನ್ನುವವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಟ್ರಾಫಿಕ್ ಜಾಮ್ ಎದುರಿಸಿದ ಚಿತ್ರವನ್ನು ಪ್ರಕಟಿಸಿದ್ದು, 1000ಕ್ಕೂ ಹೆಚ್ಚು ಮಂದಿ ಷೇರ್ ಮಾಡಿದ್ದಾರೆ. ಕಡಿದಾದ ಕಣಿವೆಯಲ್ಲಿ ಜನರು ಸಾಲುಗಟ್ಟಿಶಿಖರವನ್ನು ಏರುತ್ತಿರುವ ದೃಶ್ಯವನ್ನು ಈ ಚಿತ್ರದಲ್ಲಿ ಕಾಣಬಹುದಾಗಿದೆ.
ಟ್ರಾಫಿಕ್ ಜಾಮ್‌ಗೆ ಏನು ಕಾರಣ?
-ಮೇ 22ರಂದು ಒಂದೇ ದಿನ 320 ಮಂದಿ ಮೌಂಟ್ ಎವರೆಸ್ಟ್ ಶಿಖರವನ್ನು ಏರಲು ಮುಂದಾಗಿದ್ದರು.
- ಈ ಬಾರಿ ವಾತಾವರಣ ಚೆನ್ನಾಗಿದ್ದ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಶಿಖರಾರೋಹಿಗಳಿಗೆ ನೇಪಾಳ ಸರ್ಕಾರ ಅನುಮತಿ ನೀಡಿತ್ತು.
- ಮೇ 22ರಂದು ಒಂದೇ ದಿನ ಸುಮಾರು 320 ಶಿಖರಾರೋಹಿಗಳು ಮೌಂಟ್ ಎವರೆಸ್ಟ್ ಏರಲು ಯತ್ನ ನಡೆಸಿದ್ದರು.
- ಸುಮಾರು 200 ಮಂದಿ ಮೌಂಟ್ ಎವರೆಸ್ಟ್‌ನ ತುತ್ತತುದಿಯನ್ನು ತಲುಪುವಲ್ಲಿ ಯಶಸ್ವಿಯಾಗಿದ್ದರು.
