5ರಲ್ಲಿ 2 ಎರಡು ಮಹಿಳೆ ತನ್ನ ಮೇಲಿನ ಲೈಂಗಿಕ ಶೋಷಣೆಯನ್ನು ಬಹಿರಂಗಪಡಿಸುವುದಿಲ್ಲ. ಏಕೆ?

ನವದೆಹಲಿ, [ಅ.14]: ಲೈಂಗಿಕ ಶೋಷಣೆಯ ವಿರುದ್ಧ ದನಿ ಎತ್ತುವ ಮೀ ಟೂ ಅಭಿಯಾನ ಕಾವು ಪಡೆದುಕೊಳ್ಳುತ್ತಿದೆ.

ಇಂತಹ ಸಂದರ್ಭದಲ್ಲೇ, ವಿವಾಹ ಪೂರ್ವದಲ್ಲಿ ಲೈಂಗಿಕ ಕಿರುಕುಳಕ್ಕೆ ತುತ್ತಾಗಿದ್ದನ್ನು ಹೇಳಿಕೊಂಡ ನಾಲ್ಕರಲ್ಲಿ ಒಬ್ಬರು 15​-19 ವರ್ಷದೊಳಗಿನವರಾಗಿದ್ದಾರೆ ಎಂದು ಅಧ್ಯಯನವೊಂದು ತಿಳಿಸಿದೆ.

ವಯಸ್ಕ ಮಹಿಳೆಯರಿಗೆ ಹೋಲಿಸಿದರೆ ಅಪ್ರಾಪ್ತ ವಯಸ್ಸಿನವರ ಮೇಲೆ ನಡೆಯುವ ಹೆಚ್ಚಿನ ಕಿರುಕುಳ ಪ್ರಕರಣಗಳು ಪೊಲೀಸರಿಗೆ ವರದಿ ಆಗುವುದೇ ಇಲ್ಲ. 5ರಲ್ಲಿ 2 ಎರಡು ಮಹಿಳೆ ತನ್ನ ಮೇಲಿನ ಲೈಂಗಿಕ ಶೋಷಣೆಯನ್ನು ಬಹಿರಂಗಪಡಿಸುವುದಿಲ್ಲ.

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ- 4 (2015-16)ರ ಪ್ರಕಾರ, ಹದಿಹರೆಯದ 4.4 ಲಕ್ಷ ಬಾಲಕಿಯರು ಲೈಂಗಿಕ ದೌರ್ಜನ್ಯಕ್ಕೆ ಬಲಿಪಶುಗಳಾಗಿದ್ದಾರೆ. 

ಆದರೆ, ಅವರಲ್ಲಿ ಶೇ.35ರಷ್ಟುಮಂದಿ ಅದನ್ನು ಯಾರ ಬಳಿಯೂ ಹೇಳಿಕೊಂಡಿಲ್ಲ. ಶೇ.01ರಷ್ಟುಬಾಲಕಿಯರು ಮಾತ್ರ ಪೊಲೀಸರಿಗೆ ದೂರು ನೀಡಿದ್ದಾರೆ. 15​ರಿಂದ 49 ವರ್ಷ ವಯೋಮಾನದ 14 ಲಕ್ಷ ಮಹಿಳೆಯರು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ. 

ಇವರಲ್ಲೂ ಶೇ.42ರಷ್ಟುಮಹಿಳೆಯರು ಯಾರ ನೆರವೂ ಪಡೆದುಕೊಂಡಿಲ್ಲ. ಶೇ. 1.9ರಷ್ಟುಮಂದಿ ಮಾತ್ರ ಪೊಲೀಸರಿಗೆ ದೂರು ನೀಡಿದ್ದಾರೆ. ಬಹುತೇಕ ಸಂದರ್ಭದಲ್ಲಿ ಲೈಂಗಿಕ ಶೋಷಣೆ ಯಾರಿಂದ ಆಗಿದೆ ಎನ್ನುವುದು ತಿಳಿದೇ ಇರುತ್ತದೆ. 

ಆದರೆ, ಕುಟುಂಬದ ಗೌರವಕ್ಕಾಗಿ ಅದನ್ನು ತಮ್ಮಲ್ಲಿಯೇ ಮುಚ್ಚಿಡುತ್ತಾರೆ ಎಂದು ಅಧ್ಯಯನ ವರದಿ ತಿಳಿಸಿದೆ.