ಕಾವೇರಿ ನೀರಾವರಿ ನಿಗಮದ ಎಂಡಿ ಚಿಕ್ಕರಾಯಪ್ಪ, ರಾಜ್ಯ ಹೆದ್ದಾರಿ ಪ್ರಾಧಿಕಾರದ ಅಧ್ಯಕ್ಷ ಜಯಚಂದ್ರ ಅಮಾನತಾದ ಅಧಿಕಾರಿಗಳು.
ಬೆಳಗಾವಿ(ಡಿ.02): ಐಟಿ ದಾಳಿ ವೇಳೆ ಕಂತೆ ಕಂತೆ 2000 ರೂಪಾಯಿ ನೋಟುಗಳು ಮತ್ತು ಕೆಜಿಗಟ್ಟಲೆ ಬಂಗಾರ ಪತ್ತೆಯಾದ ಹಿನ್ನೆಲೆಯಲ್ಲಿ ಸಿಎಂ ಆಪ್ತ ಅಧಿಕಾರಿಗಳಾದ ಚಿಕ್ಕರಾಯಪ್ಪ ಮತ್ತು ಜಯಚಂದ್ರ ಅವರನ್ನ ಅಮಾನತು ಮಾಡಲಾಗಿದೆ. ವಿಧಾನಪರಿಷತ್`ನಲ್ಲಿ ಗೃಹ ಸಚಿವ ಜಿ. ಪರಮೇಶ್ವರ್ ಈ ಆದೇಶ ಮಾಡಿರುವ ಬಗ್ಗೆ ಪ್ರಕಟಿಸಿದ್ದಾರೆ.
ಕಾವೇರಿ ನೀರಾವರಿ ನಿಗಮದ ಎಂಡಿ ಚಿಕ್ಕರಾಯಪ್ಪ, ರಾಜ್ಯ ಹೆದ್ದಾರಿ ಪ್ರಾಧಿಕಾರದ ಅಧ್ಯಕ್ಷ ಜಯಚಂದ್ರ ಅಮಾನತಾದ ಅಧಿಕಾರಿಗಳು.