ಉಗ್ರರು ಮತ್ತೆ ಬಾಲಬಿಚ್ಚಿದ್ದಾರೆ. CRPF ಯೋಧರ ಮೇಲೆ ದಾಳಿ ಭಯೋತ್ಪಾದಕರು ಮಾಡಿದ್ದು, ದಾಳಿಯಲ್ಲಿ ಇಬ್ಬರು ಯೊಧರು ಹುತಾತ್ಮರಾಗಿದ್ದಾರೆ.
ಶ್ರೀನಗರ, [ಜೂನ್.12]: ಜಮ್ಮು-ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯಲ್ಲಿ ಸಿಆರ್ ಪಿಎಫ್ ಪಡೆ ಮೇಲೆ ಉಗ್ರರು ದಾಳಿ ಮಾಡಿದ್ದು, ಇಬ್ಬರು ಐವರು ಯೋಧರು ಹುತಾತ್ಮರಾಗಿದ್ದಾರೆ.
ಅನಂತ್ನಾಗ್ ಪಟ್ಟಣದ ಕೆಪಿ ಚೌಕ್ನ ಬಸ್ ನಿಲ್ದಾಣದಲ್ಲಿ ಬಳಿ, ಬೈಕ್ನಲ್ಲಿ ಬಂದ ಉಗ್ರರು ಸಿಆರ್ಪಿಎಫ್ ಯೋಧರ ಮೇಲೆ ಗುಂಡು ಹಾರಿಸಿದ್ದಾರೆ. ಪ್ರತಿಯಾಗಿ ಯೋಧರೂ ಗುಂಡಿನ ದಾಳಿ ನಡೆಸಿದ್ದಾರೆ. ಗುಂಡಿನ ಚಕಮಕಿ ವೇಳೆ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ. ಇನ್ನು ಕೆಲವರು ಗಾಯಗೊಂಡಿದ್ದಾರೆ.
ಇನ್ನು ಗುಂಡಿನ ಚಕಮಕಿಯಲ್ಲಿ ಓರ್ವ ಉಗ್ರ ಸಹ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
