ಕೇರಳ : ಚೆನ್ನೈ - ಮಂಗಳೂರು ಎಕ್ಸ್  ಪ್ರೆಸ್ ರೈಲಿನ 2 ಬೋಗಿಗಳು ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಹಳಿತಪ್ಪಿವೆ. ಈ ಘಟನೆಯಲ್ಲಿ ಯಾವುದೇ ರೀತಿಯ ಪ್ರಾಣಹಾನಿ ಸಂಭವಿಸಿಲ್ಲ. 

ಕೇರಳದ ಶೋರಾನ್ ಪುರ ರೈಲ್ವೆ ನಿಲ್ದಾಣದ ಬಳಿ ಬೆಳಗ್ಗೆ 6.30ರ ಸುಮಾರಿಗೆ ಈ ಅವಘಡವಾಗಿದೆ. 

ವಾರದ 7 ದಿನಗಳ ಕಾಲ ಸಂಚರಿಸುವ ಈ ರೈಲು ಸಂಜೆ 5 ಗಂಟೆ ವೇಳೆಗೆ ಚೆನ್ನೈ ನಿಲ್ದಾಣದಿಂದ ಹೊರಟು, ಬೆಳಗ್ಗೆ 9 ಗಂಟೆಗೆ ಮಂಗಳೂರು ತಲುಪಬೇಕಿತ್ತು.  ಒಟ್ಟು 16 ಗಂಟೆಗಳ ಪ್ರಯಾಣದ ಬಳಿಕ ರೈಲು ಮಂಗಳೂರು ರೈಲು ನಿಲ್ದಾಣ ತಲುಪುತಿತ್ತು. 

ಆದರೆ ಇದೀಗ ಹಳಿತಪ್ಪಿದ ಹಿನ್ನೆಲೆ ರೈಲು ಸಂಚಾರದಲ್ಲಿ ವ್ಯತ್ಯಯವಾಗಿದೆ.