Asianet Suvarna News Asianet Suvarna News

ಮತ್ತೆ ಪಾಕ್ ದುಷ್ಕೃತ್ಯ: ಅಪ್ರಚೋದಿತ ಗುಂಡಿನ ದಾಳಿಗೆ ಅಪ್ಪ-ಮಗಳು ಬಲಿ

ಪಾಕಿಸ್ತಾನದ ಅಟ್ಟಹಾಸ ಮಿತಿ ಮೀರುತ್ತಿದೆ. ಪದೇ ಪದೇ ಭಾರತದ ತಾಳ್ಮೆ ಕೆಣಕುತ್ತಿರುವ ಪಾಕಿಸ್ತಾನ ಇತ್ತೀಚೆಗಷ್ಟೇ ಯೋಧರ ಶಿರಚ್ಛೇದ ಮಾಡಿ ಪೈಶಾಚಿಕ ಕೃತ್ಯವೆಸಗಿತ್ತು. ಅಷ್ಟೇ ಅಲ್ಲ ಹಣಕ್ಕಾಗಿ ಬ್ಯಾಂಕ್​ ಮೇಲೂ ದಾಳಿ ಮಾಡಿ ದುರ್ಬುದ್ಧಿ ತೋರಿತ್ತು. ಇಷ್ಟಾದರೂ ಸುಮ್ಮನಿರದ ಪಾಕ್​ ಮತ್ತೆ ಮತ್ತೆ ಕದನ ವಿರಾಮ ಉಲ್ಲಂಘಿಸುತ್ತಿದೆ.   

2 civilians killed in Pak firing
  • Facebook
  • Twitter
  • Whatsapp

ಜಮ್ಮು ಕಾಶ್ಮೀರ(ಮೇ.14): ಪಾಕಿಸ್ತಾನದ ಅಟ್ಟಹಾಸ ಮಿತಿ ಮೀರುತ್ತಿದೆ. ಪದೇ ಪದೇ ಭಾರತದ ತಾಳ್ಮೆ ಕೆಣಕುತ್ತಿರುವ ಪಾಕಿಸ್ತಾನ ಇತ್ತೀಚೆಗಷ್ಟೇ ಯೋಧರ ಶಿರಚ್ಛೇದ ಮಾಡಿ ಪೈಶಾಚಿಕ ಕೃತ್ಯವೆಸಗಿತ್ತು. ಅಷ್ಟೇ ಅಲ್ಲ ಹಣಕ್ಕಾಗಿ ಬ್ಯಾಂಕ್​ ಮೇಲೂ ದಾಳಿ ಮಾಡಿ ದುರ್ಬುದ್ಧಿ ತೋರಿತ್ತು. ಇಷ್ಟಾದರೂ ಸುಮ್ಮನಿರದ ಪಾಕ್​ ಮತ್ತೆ ಮತ್ತೆ ಕದನ ವಿರಾಮ ಉಲ್ಲಂಘಿಸುತ್ತಿದೆ.   

ಗಡಿ ಭಾಗದಲ್ಲಿ ಪಾಕ್​ ಉಗ್ರರ ಕದನ ವಿರಾಮ ಉಲ್ಲಂಘನೆ ಮತ್ತು ಹಿಂಸಾತ್ಮಕ ದಾಳಿ ಮುಂದುವರೆದಿದೆ.  ಜಮ್ಮು-ಕಾಶ್ಮೀರದ ನೌಶೆರಾ ಸೆಕ್ಟರ್​ ಬಳಿ ಉಗ್ರರಿಂದ ಅಪ್ರಚೋದಿತ ಗುಂಡಿನ ದಾಳಿ ನಡೆದಿದೆ. ದಾಳಿಯಲ್ಲಿ ಅಮಾಯಕ ತಂದೆ - ಮಗಳು ಬಲಿಯಾಗಿದ್ದು ಹಲವರು ಗಾಯಗೊಂಡಿದ್ದಾರೆ. ಭಾರತೀಯ ಸೇನಾ ಶಿಬಿರವನ್ನು ಗುರಿಯಾಗಿಸಿಕೊಂಡು ಉಗ್ರರು ದಾಳಿ ಮಾಡ್ತಿದ್ದು 3 ದಿನಗಳಲ್ಲಿ 4 ಬಾರಿ ಕದನ ವಿರಾಮ ಉಲ್ಲಂಘನೆಯಾಗಿದೆ. ಮೊನ್ನೆಯಷ್ಟೇ ನೌಶೇರಾ ವಲಯದಲ್ಲಿ ಪಾಕ್  ದಾಳಿಗೆ ಮಹಿಳೆಯೊಬ್ಬರು ಮೃತಪಟ್ಟಿದ್ದಳು. ಕಳೆದ ವಾರ ಪೂಂಛ್ ಜಿಲ್ಲೆಯಲ್ಲಿ ನಡೆದ ಉಗ್ರರ ದಾಳಿಗೆ ಬಿಎಸ್ಎಫ್ ಯೋಧರು ಹತ್ಯೆಯಾಗಿದ್ದರು..

ನೌಶೇರಾದಲ್ಲಿ ಶಾಲೆಗಳಿಗೆ ರಜೆ ಘೋಷಣೆ: ಸಾವಿರಕ್ಕೂ ಹೆಚ್ಚು ಜನರ ಸ್ಥಳಾಂತರ

ಇನ್ನು ನೌಶೇರಾದಲ್ಲಿ ಪಾಕ್​ ದಾಳಿ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಶಾಲಾ- ಕಾಲೇಜುಗಳುಗಳಿಗೆ ರಜೆ ಘೋಷಿಸಲಾಗಿದೆ. ಗಡಿಭಾಗದ ಸಾವಿರಕ್ಕೂ ಹೆಚ್ಚು ಮಂದಿಯನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗಿದೆ. ಅಲ್ಲದೇ ಕೆಲವರು ಸೇನೆ ನಿರ್ಮಿಸಿರುವ ಮರಳು ಚೀಲಗಳ ಮಧ್ಯೆಯೇ ನಲಗುತ್ತಾ ರಕ್ಷಣೆ ಪಡೆಯುತ್ತಿದ್ದಾರೆ.

ಇವೆಲ್ಲದರ ಮಧ್ಯೆ 26/11 ದಾಳಿಯ ಮಾಸ್ಟರ್​ ಮೈಂಡರ್​ ಹಫೀಜ್ ಸಯೀದ್​​ ಪಾಕ್​ ಪೊಲೀಸರ ಭದ್ರತೆಯಲ್ಲೇ ಲಾಹೋರ್'​ನಲ್ಲಿ ಸಾರ್ವಜನಿಕವಾಗಿ ಓಡಾಡುತ್ತಿರುವ ವಿಷಯ ಬಯಲಾಗಿದೆ. ಈ ಮೂಲಕ ಹಫೀಜ್​ಗೆ ಗೃಹ ಬಂಧನ ವಿಧಿಸಿದ್ದೇವೆ ಅಂತ ಸುಳ್ಳು ಹೇಳ್ತಿರೋ ಪಾಕಿಸ್ತಾನದ ಮುಖವಾಡ ಮತ್ತೊಮ್ಮೆ ಬಯಲಾಗಿದೆ.

ಒಟ್ಟಿನಲ್ಲಿ ಪಾಕ್​ ಪುಂಡಾಟದಿಂದ ಭಾರತದಲ್ಲಿ ಶಾಂತಿ ಕದಡಿದ್ದು ದೇಶ ರಕ್ಷಣೆಗೆ ಹೋರಾಟದ ಕೂಗು ಕೇಳಿಬಂದಿದೆ. ಪ್ರತಿದಾಳಿ ಮೂಲಕ ಭಾರತೀಯ ಯೋಧರು ದಿಟ್ಟ ಪ್ರತ್ಯುತ್ತರ ನೀಡಿದ್ದಾರೆ. ಉಗ್ರರ ಹುಟ್ಟಡಗಿಸಲು ನಮ್ಮ ಸೈನಿಕರು ಎದೆಯೊಡ್ಡಿ ನಿಂತಿದ್ದಾರೆ.

Follow Us:
Download App:
  • android
  • ios