ಘಟನೆಯಲ್ಲಿ ನಾಲ್ವರು ಪೊಲೀಸರು ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶ್ರೀನಗರ(ಮೇ.07): ಇತ್ತೀಚೆಗಷ್ಟೇ ಭಾರತದ ಗಡಿಯೊಳಗೆ ನುಸುಳಿ ಇಬ್ಬರು ಭಾರತೀಯ ಸೈನಿಕರ ಶಿರಚ್ಛೇದ ಮಾಡಿದ ಬಳಿಕ ಜಮ್ಮು-ಕಾಶ್ಮೀರದಾದ್ಯಂತ ಕಾರ್ಯಾಚರಣೆ ಕೈಗೊಂಡಿದ್ದ ಭದ್ರತಾ ಪಡೆಗಳು ಉಗ್ರರ ಅಡಗು ತಾಣಗಳಿಗಾಗಿ ತೀವ್ರ ಶೋಧ ನಡೆಸಿತ್ತು. ಆದರೆ, ಇದರ ಬೆನ್ನಲ್ಲೇ, ಕುಲ್ಗಾಂ ಜಿಲ್ಲೆಯಲ್ಲಿ ಶನಿವಾರದ ಉಗ್ರರ ಶಸಸಜ್ಜಿತ ದಾಳಿಯಲ್ಲಿ ಇಬ್ಬರು ಪೊಲೀಸರು ಮತ್ತು ಇಬ್ಬರು ನಾಗರಿಕರು ಬಲಿಯಾಗಿದ್ದಾರೆ. ಅಲ್ಲದೇ, ಘಟನೆಯಲ್ಲಿ ನಾಲ್ವರು ಪೊಲೀಸರು ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಲ್ಗಾಂ ಜಿಲ್ಲೆ ಮೀರ್ ಬಜಾರ್‌ನಲ್ಲಿರುವ ಪೊಲೀಸ್ ಪಡೆ ಗುರಿಯಾಗಿಸಿ ಉಗ್ರರು ದಾಳಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
(ಸಾಂದರ್ಭಿಕ ಚಿತ್ರ)
