ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಹತ್ಯೆಗೆ ಸಂಚು ನಡೆದಿತ್ತಾ? ಹೀಗೊಂದು ಸುದ್ದಿ ಎಲ್ಲೆಡೆ ಹಬ್ಬಿದೆ. ನಿರ್ಮಲಾ ಸೀತಾರಾಮನ್‌  ಅವರನ್ನ ಹತ್ಯೆ ಮಾಡುವುದಾಗಿ ವಾಟ್ಸಪ್ ಸಂದೇಶವನ್ನ ಹರಿಬಿಡಲಾಗಿದೆ. 

ಉತ್ತರಾಖಂಡ, (ಸೆ.18): ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಹತ್ಯೆಗೆ ಸಂಚು ರೂಪಿಸಿದ್ರಾ? ಹೀಗೊಂದು ಸುದ್ದಿ ಎಲ್ಲೆಡೆ ಹಬ್ಬಿದೆ. ನಿರ್ಮಲಾ ಸೀತಾರಾಮನ್‌ ಅವರನ್ನ ಹತ್ಯೆ ಮಾಡುವುದಾಗಿ ವಾಟ್ಸಪ್ ಸಂದೇಶವನ್ನ ಹರಿಬಿಡಲಾಗಿದೆ. 

 ನಿರ್ಮಲಾ ಸೀತಾರಾಮನ್‌ ಅವರ ಹತ್ಯೆ ಮಾಡುವ ಬಗ್ಗೆ ವಾಟ್ಸಾಪ್‌ನಲ್ಲಿ ಇಬ್ಬರ ನಡುವೆ ವಾಟ್ಸಾಪ್‌ ಚಾಟ್‌ ನಡೆದಿದೆ. ಈ ಸಂಗತಿ ಪೊಲೀಸರಿಗೆ ಲಭ್ಯವಾಗಿದ್ದು, ಇಬ್ಬರು ಯುವಕರನ್ನು ಬಂಧಿಸಿದ್ದಾರೆ. ಕುಡಿದ ಮತ್ತಿನಲ್ಲಿ ಈ ರೀತಿಯಾಗಿ ವಾಟ್ಸಾಪ್‌ ಸಂದೇಶವನ್ನು ಹರಿಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ. 

ಇಬ್ಬರಲ್ಲಿ ಒಬ್ಬ ‘ನಾನು ನಿರ್ಮಲಾ ಸೀತಾರಾಮನ್‌ ಮೇಲೆ ಗುಂಡು ಹಾರಿಸುತ್ತೇನೆ. ನಾಳೆ ಅವರ ಕೊನೆಯ ದಿನ’ ಎಂದು ವಾಟ್ಸಾಪ್‌ ಗ್ರೂಪ್‌ನಲ್ಲಿ ಸಂದೇಶ ಕಳುಹಿಸಿದ್ದ. ಬಂಧಿತ ಆರೋಪಿಗಳು ವಿರುದ್ಧ ಐಟಿ ಕಾಯ್ದೆಯ ಅಡಿ ಪ್ರಕರಣದ ದಾಖಲಿಸಿಕೊಳ್ಳಲಾಗಿದ್ದು, ಬಂಧಿತರು ಯಾವುದಾದರೂ ಕ್ರಿಮಿನಲ್‌ ಹಿನ್ನೆಲೆ ಹೊಂದಿದ್ದಾರೆಯೇ, ಶಸ್ತ್ರಾಸ್ತ್ರ ಅಥವಾ ಸ್ಫೋಟಕಗಳನ್ನು ಇಟ್ಟುಕೊಂಡಿದ್ದಾರೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.