ಕರ್ನಲ್ ಕಪಿಲ್ ಯಾದವ್ ಮತ್ತು ಕರ್ನಲ್ ಹರ್‌ಪ್ರೀತ್ ಅವರಿಗೆ ಯುದ್ಧ ಸೇವಾ ಪದಕ ನೀಡಿ ಗೌರವಿಸಲಾಗುತ್ತಿದೆ. ಐವರು ಸಿಬ್ಬಂದಿಗೆ ಶೌರ್ಯ ಚಕ್ರ ಮತ್ತು 13 ಮಂದಿಗೆ ಸೇನಾ ಪದಕಕ್ಕೆ ಆಯ್ಕೆಯಾಗಿದ್ದಾರೆ.
ನವದೆಹಲಿ(ಜ.25): ಇತ್ತೀಚೆಗಷ್ಟೇ ಪಾಕಿಸ್ತಾನದ ಗಡಿಯೊಳಗೆ ನುಗ್ಗಿ ಅಲ್ಲಿನ ಉಗ್ರರ ನೆಲೆಗಳನ್ನು ‘ಧ್ವಂಸ ಮಾಡಿ ಬಂದ ಅರೆಸೇನಾ ಪಡೆಯ ವಿಶೇಷ ದಳದ 19 ಯೋಧರಿಗೆ ಶೌರ್ಯ ಮತ್ತು ಕೀರ್ತಿ ಚಕ್ರ ಪ್ರಕಟಿಸಲಾಗಿದೆ. ಈ ವೀರ ಯೋಧರನ್ನು ಮುನ್ನಡೆಸಿದ ಕಮಾಂಡಿಂಗ್ ಅಧಿಕಾರಿಗಳಿಗೆ ಯುದ್ಧ ಸೇವಾ ಪದಕ ಘೋಷಿಸಲಾಗಿದೆ. ‘ಭಯೋತ್ಪಾದನಾ ನಿಗ್ರಹಕ್ಕಾಗಿ ಎಲ್ಒಸಿ ದಾಟಿದ ತಂಡದ ಯೋಧರಲ್ಲೊಬ್ಬರಾಗಿರುವ ಮೇಜರ್ ರೋಹಿತ್ ಸೂರಿ ಅವರಿಗೆ ಕೀರ್ತಿ ಚಕ್ರ ನೀಡಿ ಗೌರವಿಸಲಾಗುತ್ತಿದೆ. ಹವಿಲ್ದಾರ್ ಪ್ರೇಮ್ ಬಹಾದೂರ್ ರೇಸ್ಮಿ ಮಗರ್ ಅವರಿಗೆ ಮರಣೋತ್ತರವಾಗಿ ಕೀರ್ತಿ ಚಕ್ರ ಪ್ರಕಟಿಸಲಾಗಿದೆ.
ಕರ್ನಲ್ ಕಪಿಲ್ ಯಾದವ್ ಮತ್ತು ಕರ್ನಲ್ ಹರ್ಪ್ರೀತ್ ಅವರಿಗೆ ಯುದ್ಧ ಸೇವಾ ಪದಕ ನೀಡಿ ಗೌರವಿಸಲಾಗುತ್ತಿದೆ. ಐವರು ಸಿಬ್ಬಂದಿಗೆ ಶೌರ್ಯ ಚಕ್ರ ಮತ್ತು 13 ಮಂದಿಗೆ ಸೇನಾ ಪದಕಕ್ಕೆ ಆಯ್ಕೆಯಾಗಿದ್ದಾರೆ. ಸೆಪ್ಟಂಬರ್ನಲ್ಲಿ ಜಮ್ಮು-ಕಾಶ್ಮೀರದ ಉರಿ ಸೇನಾ ಶಿಬಿರದ ಮೇಲೆ ನಡೆದ ‘ಭಯೋತ್ಪಾದಕ ದಾಳಿಯ ಬಳಿಕ ‘ಭಾರತೀಯ ಸೇನೆಯು ಸರ್ಜಿಕಲ್ ದಾಳಿ ನಡೆಸಿ, ‘ಭಯೋತ್ಪಾದಕ ಶಿಬಿರವನ್ನು ನಾಶಗೊಳಿಸಿತ್ತು.
