ಆಗಸ್ಟ್‌‌ 15ರಂದು ದೇಶಾದ್ಯಂತ 70ನೇ ಸ್ವಾತಂತ್ರ್ಯೋತ್ಸವ ಆಚರಣೆಗೆ ಅದ್ಧೂರಿ ತಯಾರಿ ನಡೆದಿವೆ. ಇದರ ಮಧ್ಯೆ ಗುಜರಾತ್‌ನ ವಿದ್ಯಾರ್ಥಿಗಳು ವಿಶೇಷವಾಗಿ ಭಾರತದ ನಕ್ಷೆ ಮಾಡಿ, ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಸಿದ್ದಾರೆ.
ಸೂರತ್(ಆ.14): ಆಗಸ್ಟ್ 15ರಂದು ದೇಶಾದ್ಯಂತ 70ನೇ ಸ್ವಾತಂತ್ರ್ಯೋತ್ಸವ ಆಚರಣೆಗೆ ಅದ್ಧೂರಿ ತಯಾರಿ ನಡೆದಿವೆ. ಇದರ ಮಧ್ಯೆ ಗುಜರಾತ್ನ ವಿದ್ಯಾರ್ಥಿಗಳು ವಿಶೇಷವಾಗಿ ಭಾರತದ ನಕ್ಷೆ ಮಾಡಿ, ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಸಿದ್ದಾರೆ.
ಇಲ್ಲಿನ ಸ್ವಾಮಿ ನಾರಾಯಣ್ ಗುರುಕುಲ ಶಾಲೆಯ 1,800 ವಿದ್ಯಾರ್ಥಿಗಳು ಒಟ್ಟಿಗೆ ಸೇರಿ ಭಾರತದ ನಕ್ಷೆ ರಚನೆ ಮಾಡುವ ಮೂಲಕ ಯೋಧರಿಗೆ ವಿಶೇಷ ಗೌರವ ಸಲ್ಲಿಸಿದ್ದಾರೆ. ಇದಕ್ಕಾಗಿ ಶಾಲಾ ಮಕ್ಕಳು ಕಳೆದ ಒಂದು ತಿಂಗಳಿಂದ ಸಕಲ ಸಿದ್ಧತೆ ನಡೆಸಿದ್ದಾಗಿ ತಿಳಿದು ಬಂದಿದೆ.
