ನವದೆಹಲಿ [ಜೂ.17]: ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಪುನರ್‌ಆಯ್ಕೆಯಾದ ನಂತರ ಸ್ಥಾಪಿತವಾಗಿರುವ 17 ನೇ ಲೋಕಸಭೆಯ ಮೊದಲ ಅಧಿವೇಶನ ಸೋಮವಾರ ದಿಂದ ಆರಂಭವಾಗಲಿದೆ. 

ಈ ಬಾರಿ ಅಧಿವೇಶನದಲ್ಲಿ ನೂತನ ಸಂಸದರ ಪ್ರಮಾಣ, ಸ್ಪೀಕರ್ ಆಯ್ಕೆ ಹಾಗೂ ಬಜೆಟ್ ಮಂಡನೆ ನಡೆಯಬೇಕಿವೆ. ಜತೆಗೆ ತ್ರಿವಳಿ ತಲಾಖ್ ಸೇರಿದಂತೆ ಹಲವು ಮಸೂದೆಗಳು ಅಂಗೀಕಾರವಾಗುವ ನಿರೀಕ್ಷೆ ಇದೆ.

ಜೂ. 20 ರಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಭಾಷಣ ಮಾಡಲಿದ್ದಾರೆ. ವಿವಿಧ  ವಿಚಾರಗಳು ಹೊಸ ಲೋಕಸಭೆಯಲ್ಲಿ ಚರ್ಚೆಗೆ ಬರುವ ಸಾಧ್ಯತೆ ಇದೆ.