ಬೆಂಗಳೂರು :  ರಾಜಧಾನಿ ಬೆಂಗಳೂರಿನಲ್ಲಿ ವರ್ಷದಿಂದ ವರ್ಷಕ್ಕೆ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದೆ. ಸಾರಿಗೆ ಇಲಾಖೆಯ ಅಂಕಿ-ಅಂಶಗಳ ಪ್ರಕಾರ ಪ್ರತಿ ದಿನ ನಗರದಲ್ಲಿ 1,763 ಹೊಸ ವಾಹನಗಳು ನೋಂದಣಿಯಾಗುತ್ತಿವೆ. ಈ ಪೈಕಿ 1,240 ದ್ವಿಚಕ್ರ ವಾಹನಗಳೇ ಇರುವುದು ಗಮನಾರ್ಹ.

ಕಳೆದ 2018ರ ಮಾಚ್‌ರ್‍ ಅಂತ್ಯಕ್ಕೆ ನಗರದಲ್ಲಿ ಒಟ್ಟು 74,06,202 ವಾಹನಗಳಿದ್ದವು. 2019 ಮಾಚ್‌ರ್‍ ಅಂತ್ಯಕ್ಕೆ ವಾಹನ ಸಂಖ್ಯೆ 80,49,891ಕ್ಕೆ ಏರಿಕೆಯಾಗಿದೆ. 2018ರ ಮಾಚ್‌ರ್‍ ಅಂತ್ಯಕ್ಕೆ 51.34 ಲಕ್ಷವಿದ್ದ ದ್ವಿಚಕ್ರವಾಹನಗಳು, 2019ರ ಮಾಚ್‌ರ್‍ ಅಂತ್ಯದ ವೇಳೆಗೆ 55.88 ಲಕ್ಷಕ್ಕೆ ಏರಿಕೆಯಾಗಿದೆ. ಬೆಂಗಳೂರು ನಗರದ 11 ಆರ್‌ಟಿಓ ವಿಭಾಗಗಳ ಪೈಕಿ ಇದುವರೆಗೆ ಬೆಂಗಳೂರು ದಕ್ಷಿಣದಲ್ಲಿ 9.26 ಹಾಗೂ ಬೆಂಗಳೂರು ಪಶ್ಚಿಮದಲ್ಲಿ 8.76 ಲಕ್ಷ ದ್ವಿಚಕ್ರವಾಹನಗಳು ನೋಂದಣಿಯಾಗಿವೆ.

ಇನ್ನು ನಗರದಲ್ಲಿ 2018 ಮಾಚ್‌ರ್‍ ಅಂತ್ಯಕ್ಕೆ 14.32 ಲಕ್ಷ ಕಾರುಗಳಿದ್ದವು. 2019 ಮಾಚ್‌ರ್‍ ಅಂತ್ಯಕ್ಕೆ ಈ ಸಂಖ್ಯೆ 15.41 ಲಕ್ಷಕ್ಕೆ ಏರಿಕೆಯಾಗಿದೆ. ಒಂದು ವರ್ಷದ ಅವಧಿಯಲ್ಲಿ ನಗರದಲ್ಲಿ 1.08 ಲಕ್ಷ ಹೊಸ ಕಾರುಗಳು ನೋಂದಣಿಯಾಗಿವೆ. ಬೆಂಗಳೂರು ಪೂರ್ವ ಆರ್‌ಟಿಓದಲ್ಲಿ ಅತ್ಯಧಿಕ(2.88 ಲಕ್ಷ)ಕಾರುಗಳು ನೋಂದಣಿಯಾಗಿವೆ.

ಒಂದು ಕೋಟಿ ಸಮೀಪ:

ಪ್ರಸ್ತುತ ದೆಹಲಿ ನಗರದಲ್ಲಿ ವಾಹನಗಳ ಸಂಖ್ಯೆ ಒಂದು ಕೋಟಿ ಮೀರಿದೆ. ಬೆಂಗಳೂರಿನಲ್ಲಿ ಪ್ರತಿ ವರ್ಷ ಸುಮಾರು ಆರು ಲಕ್ಷ ಹೊಸ ವಾಹನಗಳು ವಾಹನಗಳ ನೋಂದಣಿಯಾಗುತ್ತಿವೆ. ಇದರಿಂದ ಇನ್ನು ನಾಲ್ಕು ವರ್ಷಗಳಲ್ಲಿ ವಾಹನಗಳ ಸಂಖ್ಯೆ ಒಂದು ಕೋಟಿ ದಾಟಲಿದೆ. ಈಗಾಗಲೇ ನಗರದಲ್ಲಿ ವಾಹನ ಸಂಚಾರ ದಟ್ಟಣೆ ನಗರದ ದೊಡ್ಡ ಸಮಸ್ಯೆಯಾಗಿದೆ. ಇನ್ನು ವಾಹನಗಳ ಸಂಖ್ಯೆ ಒಂದು ಕೋಟಿ ದಾಟಿದರೆ ಸಂಚಾರ ದಟ್ಟಣೆ ಸಮಸ್ಯೆ ಮತ್ತಷ್ಟುಬಿಗಡಾಯಿಸಲಿದೆ.

ರಾಜಧಾನಿಯಲ್ಲಿ ಕಳೆದ ಐದು ವರ್ಷದ ವಾಹನಗಳ ಮಾಹಿತಿ

ವರ್ಷ    ವಾಹನ ಸಂಖ್ಯೆ

2014-15    55,59,730

2015-16    61,12,897

2016-17    68,33,080

2017-18    74,06,202

2018-19    80,49,891