ನಗರದ ಸೊಂತಲಿಂಗಣ್ಣ ಕಾಲೋನಿಯ ಬಸಲಿಂಗರೆಡ್ಡಿ ಎಂಬುವರ ಮನೆಯನ್ನು ಬಾಡಿಗೆ ಪಡೆದ ಮೋಹನ್ ರೆಡ್ಡಿ ಎಂಬಾತ, ಬಳ್ಳಾರಿ, ಕೂಡ್ಲಿಗಿ ಸೇರಿದಂತೆ ಆಂಧ್ರದ ಕೆಲ ಹಳ್ಳಿಗಳಿಂದ ಬಾಲಕರನ್ನು ಕರೆತಂದು ಕೂಡಿಹಾಕಿದ್ದನು.
ಬಳ್ಳಾರಿ (ಡಿ.01): ಮದ್ಯದಂಗಡಿಗಳಲ್ಲಿ ಕೆಲಸ ಮಾಡಲು, ಬಾಲಕರನ್ನು ಕರೆತಂದು ಮನೆಯೊಂದಕ್ಕೆ ಕೂಡಿಹಾಕಿ ಕೆಲಸಕ್ಕೆ ಕಳುಹಿಸುತ್ತಿದ್ದ ಜಾಲವನ್ನೊಂದು ಬಳ್ಳಾರಿ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.
ನಗರದ ಸೊಂತಲಿಂಗಣ್ಣ ಕಾಲೋನಿಯ ಬಸಲಿಂಗರೆಡ್ಡಿ ಎಂಬುವರ ಮನೆಯನ್ನು ಬಾಡಿಗೆ ಪಡೆದ ಮೋಹನ್ ರೆಡ್ಡಿ ಎಂಬಾತ, ಬಳ್ಳಾರಿ, ಕೂಡ್ಲಿಗಿ ಸೇರಿದಂತೆ ಆಂಧ್ರದ ಕೆಲ ಹಳ್ಳಿಗಳಿಂದ ಬಾಲಕರನ್ನು ಕರೆತಂದು ಕೂಡಿಹಾಕಿದ್ದನು.
ಇಲ್ಲಿಂದ ಮಕ್ಕಳನ್ನು ಪ್ರತಿದಿನ ವಾಹನಗಳ ಮೂಲಕ ಬಾರ್ &ರೆಸ್ಟೋರೆಂಟ್ ಗಳಲ್ಲಿ ಕೆಲಸ ಮಾಡಲುಕಳುಹಿಸುತ್ತಿದ್ದನು.
ಸುತ್ತಮುತ್ತಲಿನ ಜನರಿಗೆ ವಿಷಯ ತಿಳಿಯದಂತೆ ಮನೆಯ ಕಿಟಕಿ ಮತ್ತು ಬಾಗಿಲು ಮುಚ್ಚಿ ಹೊರಹೋಗದಂತೆ ನೋಡಿಕೊಳ್ಳುತ್ತಿದ್ದನು.
ಈ ಮಾಹಿತಿ ತಿಳಿದ ಮಕ್ಕಳ ಹಕ್ಕುಗಳ ರಕ್ಷಣಾ ಸಮಿತಿಯ ಅಧಿಕಾರಿಗಳು ಮನೆಯ ಮೇಲೆ ದಾಳಿ ನಡೆಸಿ 17 ಮಕ್ಕಳನ್ನು ರಕ್ಷಿಸಿದ್ದಾರೆ.