ಕಾಂಗ್ರೆಸ್‌ ಟಿಕೆಟ್‌'ಗಾಗಿ 1600 ಮಂದಿ ಅರ್ಜಿ

First Published 13, Mar 2018, 8:32 AM IST
1600 Congress aspirants Candidates apply for Tickets
Highlights

ನಿರೀ​ಕ್ಷೆ​ಯಂತೆಯೇ ಮುಖ್ಯ​ಮಂತ್ರಿ ಸಿದ್ದ​ರಾ​ಮಯ್ಯ ಅವರು ಚಾಮುಂಡೇ​ಶ್ವರಿ, ಅವರ ಪುತ್ರ ಡಾ.ಯತೀಂದ್ರ ಅವರು ವರು​ಣಾ​ದಿಂದ ಅರ್ಜಿ ಸಲ್ಲಿ​ಸಿ​ರು​ವು​ದು ಸೇರಿ​ದಂತೆ ಹಲ​ವಾರು ಕಾಂಗ್ರೆಸ್‌ ಮುಖಂಡರು ಹಾಗೂ ಅವರ ಪುತ್ರರು ಟಿಕೆಟ್‌ ಕೋರಿ ಅರ್ಜಿ ಸಲ್ಲಿ​ಸಿದ್ದಾರೆ.

ಬೆಂಗ​ಳೂರು(ಮಾ.13): ಮುಖ್ಯ​ಮಂತ್ರಿ ಸಿದ್ದ​ರಾ​ಮಯ್ಯ, ಕೆಪಿ​ಸಿಸಿ ಅಧ್ಯಕ್ಷ ಡಾ.ಜಿ. ಪರ​ಮೇ​ಶ್ವರ್‌ ಸೇರಿ​ದಂತೆ ಕಾಂಗ್ರೆ​ಸ್‌ನ ಬಹು​ತೇಕ ಎಲ್ಲಾ ಶಾಸ​ಕರು, ಕಳೆದ ಬಾರಿಯ ಪರಾ​ಜಿತ ಅಭ್ಯ​ರ್ಥಿ​ಗಳು, ಹಿರಿಯ ಮುಖಂಡರು ಹಾಗೂ ಹಲವು ಮುಖಂಡರ ಪುತ್ರರು ಸೇರಿ​ದಂತೆ ವಿಧಾ​ನ​ಸಭಾ ಚುನಾ​ವ​ಣೆಗೆ ಕಾಂಗ್ರೆಸ್‌ ಪಕ್ಷದ ಟಿಕೆಟ್‌ಗಾಗಿ 1600 ಮಂದಿ ಅರ್ಜಿ ಸಲ್ಲಿ​ಸಿ​ದ್ದಾ​ರೆ.

ಟಿಕೆಟ್‌ಗಾಗಿ ಕೆಪಿಸಿಸಿಗೆ ಅರ್ಜಿ ಸಲ್ಲಿ​ಸಲು ಸೋಮ​ವಾರ ಕಡೆಯ ದಿನ​ವಾ​ಗಿದ್ದು, ಸುಮಾರು 2450 ಮಂದಿ ಅರ್ಜಿ​ಯನ್ನು ಪಡೆ​ದು​ಕೊಂಡಿ​ದ್ದರು. ಈ ಪೈಕಿ 1600 ಮಂದಿ ಅರ್ಜಿ​ ಸಲ್ಲಿಸಿದ್ದಾರೆ. ನಿರೀ​ಕ್ಷೆ​ಯಂತೆಯೇ ಮುಖ್ಯ​ಮಂತ್ರಿ ಸಿದ್ದ​ರಾ​ಮಯ್ಯ ಅವರು ಚಾಮುಂಡೇ​ಶ್ವರಿ, ಅವರ ಪುತ್ರ ಡಾ.ಯತೀಂದ್ರ ಅವರು ವರು​ಣಾ​ದಿಂದ ಅರ್ಜಿ ಸಲ್ಲಿ​ಸಿ​ರು​ವು​ದು ಸೇರಿ​ದಂತೆ ಹಲ​ವಾರು ಕಾಂಗ್ರೆಸ್‌ ಮುಖಂಡರು ಹಾಗೂ ಅವರ ಪುತ್ರರು ಟಿಕೆಟ್‌ ಕೋರಿ ಅರ್ಜಿ ಸಲ್ಲಿ​ಸಿದ್ದಾರೆ.

2018ರಲ್ಲಿ ನಡೆಯಲಿರುವ 224 ಕ್ಷೇತ್ರಗಳ ಚುನಾವಣೆಗೆ ಸ್ಪರ್ಧೆ ಬಯಸಿ ಮತ್ತೊಮ್ಮೆ ಅರ್ಜಿಸಲ್ಲಿಸಿದ್ದಾರೆ. ಹಾಲಿ 123 ಶಾಸಕರಿಗೆ ಬಹುತೇಕ ಟಿಕೆಟ್ ಸಿಗುವುದು ಖಚಿತ ಎನ್ನಲಾಗುತ್ತಿದೆ ಕಾಂಗ್ರೆಸ್ ಮೂಲಗಳು.

loader