ಹೆಣ್ಣಿನ ಮೇಲೆ ಶೋಷಣೆಯ ಒಂದೆಲ್ಲಾ ಒಂದು ಪ್ರಕರಣಗಳು ದೇಶದಲ್ಲಿ ಪ್ರತಿದಿನ ವರದಿಯಾಗುತ್ತಲೆ ಇರುತ್ತವೆ. 16 ರ ಬಾಲಕಿಒಯೊಬ್ಬಳನ್ನು ಪುಂಡರು ಕೈ ಹಿಡಿದು ಎಳೆಯುತ್ತಿರುವ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಝಾನ್ಸಿ[ಜು.24] ಬಾಲಕಿವೋರ್ವಳನ್ನು ಮೂವರು ಪುಂಡರು ರಸ್ತೆಯಲ್ಲೇ ಎಳೆದಾಡಿ ಕಿರುಕುಳ ನೀಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಮಹರಿದಾಡಿದೆ. 16 ವರ್ಷದ ಬಾಲಕಿ ಹಿಂದೆ ಬಿದ್ದು ಹಿಂಸಿಸಲಾಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ಘಟನೆ ಸಂಬಂಧ ಮೂವರನ್ನು ಬಂಧಿಸಿದ್ದಾರೆ.
ಮಹಿಳಾ ಪತ್ರಕರ್ತೆ ತಬ್ಬಿಕೊಂಡ ಪೊಲೀಸ್ ಪೇದೆ!
ಜುಲೈ 12ರಂದು ಈ ಘಟನೆ ನಡೆದಿದೆ ಎಂದು ಹೇಳಲಾಗ್ತಿದೆ. ಬಾಲಕಿಯನ್ನು ಹೇಗೆ ಬೇಕೋ ಹಾಗೆ ಎಳೆದಾಡಿದ್ದಾರೆ. ಒಬ್ಬ ವ್ಯಕ್ತಿ ವಿಡಿಯೋ ಸಹ ಮಾಡಿದ್ದಾನೆ. ಬಾಲಕಿ ಅಂಗಲಾಚಿ ಬೇಡಿಕೊಂಡರು ಪುಂಡರು ಮಾತ್ರ ಹಿಂದೆ ಸರಿದಿಲ್ಲ.
