ಕಳೆದ ಆಗಸ್ಟ್’ನಲ್ಲಿ ಮಕ್ಕಳ ಸಾವಿನ ಮೂಲಕ ದೇಶಾದ್ಯಂತ ಭಾರೀ ಚರ್ಚೆಯಾದ ಉತ್ತರ ಪ್ರದೇಶದ ಗೋರಖ್’ಪುರ ಆಸ್ಪತ್ರೆಯು ಇನೊಮ್ಮೆ ಸುದ್ದಿಯಾಗಿದೆ. ಕಳೆದ 24 ಗಂಟೆಗಳಲ್ಲಿ 16 ಮಕ್ಕಳು ಇಲ್ಲಿ ಸಾವನಪ್ಪಿದ್ದಾರೆ ಎಂದು ವರದಿಯಾಗಿದೆ.

ಗೋರಖ್'ಪುರ, ಉತ್ತರ ಪ್ರದೇಶ: ಕಳೆದ ಆಗಸ್ಟ್’ನಲ್ಲಿ ಮಕ್ಕಳ ಸಾವಿನ ಮೂಲಕ ದೇಶಾದ್ಯಂತ ಭಾರೀ ಚರ್ಚೆಯಾದ ಉತ್ತರ ಪ್ರದೇಶದ ಗೋರಖ್’ಪುರ ಆಸ್ಪತ್ರೆಯು ಇನೊಮ್ಮೆ ಸುದ್ದಿಯಾಗಿದೆ. ಕಳೆದ 24 ಗಂಟೆಗಳಲ್ಲಿ 16 ಮಕ್ಕಳು ಇಲ್ಲಿ ಸಾವನಪ್ಪಿದ್ದಾರೆ ಎಂದು ವರದಿಯಾಗಿದೆ.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕ್ಷೇತ್ರವಾಗಿರುವ ಗೋರಖ್’ಪುರದ ಬಿಆರ್’ಡಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಲಿಂಡರ್ ಪೂರೈಕೆಯ ಕೊರತೆಯಿಂದ ಆಗಸ್ಟ್ ಆರಂಭದಲ್ಲಿ ಸುಮಾರು 70 ಮಕ್ಕಳು ಸಾವನಪ್ಪಿದ್ದರು. ಅದೇ ತಿಂಗಳಾಂತ್ಯದಲ್ಲಿ ಎನ್ಸಿಪಾಲಿಟಿ, ನಿಮೋನಿಯಾ, ಸೆಪ್ಸಿಸ್ ಹೀಗೆ ವಿವಿಧ ಬಗೆಯ ಕಾಯಿಲೆಗಳಿಂದ 72 ಗಂಟೆಗಳಲ್ಲಿ 61 ಮಕ್ಕಳು ಮೃತಪಟ್ಟಿದ್ದಾರೆಂದು ವರದಿಯಾಗಿತ್ತು.

ಅದೇ ರೀತಿ ಈ ಬಾರಿಯೂ ಎನ್ಸಿಪಾಲಿಟಿ ಕಾಯಿಲೆಯಿಂದಲೇ ಮೃತಪಟ್ಟಿದ್ದಾರೆಂದು ಅಧಿಕಾರಿಗಳು ಹೇಳಿದ್ದಾರೆ.

ಆಗಸ್ಟ್ ತಿಂಗಳಿನಲ್ಲಿ ಮಕ್ಕಳ ಸಾವಿನ ಸಂಖ್ಯೆ 290ಕ್ಕೆ ತಲುಪಿದೆ. ಅವುಗಳಲ್ಲಿ 213 ಮಕ್ಕಳು ನಿಯೋ-ನೇಟಲ್ ಐಸಿಯುನಲ್ಲಿ ಮೃತಪಟ್ಟಿದ್ದರೆ, 77 ಮಕ್ಕಳು ಎನ್ಸಿಪಾಲಿಟಿ ವಿಭಾಗದಲ್ಲಿ ಮೃತಪಟ್ಟಿದ್ದಾರೆಂದು ಬಿಆರ್'ಡಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಪಿ.ಕೆ.ಸಿಂಗ್ ಹೇಳಿದ್ದಾರೆ. ಈ ವರ್ಷದಲ್ಲಿ ಸುಮಾರು 1250 ಮಕ್ಕಳು ಈ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

(ಸಾಂದರ್ಭಿಕ ಚಿತ್ರ)