ಸಚಿವ ರಮೇಶ್​ ಜಾರಕಿಹೊಳಿ ಮನೆಯಲ್ಲಿ ದಾಖಲೆ ಇಲ್ಲದ 150 ಕೋಟಿ ರೂ. ಹಣ ಮತ್ತು 12 ಕೆಜಿ ಬಂಗಾರವನ್ನ ವಶಪಡಿಸಿಕೊಳ್ಳಲಾಗಿದೆ ಎಂದು ಐಟಿ ಅಧಿಕಾರಿಗಳು ತಿಳಿಸಿದ್ಧಾರೆ. ವಶಪಡಿಸಿಕೊಂಡಿರುವ ಈ ಸಂಪತ್ತಿಗೆ ಸಂಬಂಧಿಸಿದಂತೆ ಸೂಕ್ತ ದಾಖಲೆ ಒದಗಿಸುವಂತೆ ಈಗಾಗಲೇ ಸಚಿವರಿಗೆ ನೋಟಿಸ್ ಸಹ ನೀಡಲಾಗಿದೆ. ಕಳೆದ ಶುಕ್ರವಾರದಿಂದ ರಮೇಶ್​ ಮನೆಯಲ್ಲಿ ಶೋಧ ನಡೆದಿತ್ತು.

ಬೆಂಗಳೂರು(ಜ.23): ಕಳೆದ ಕೆಲ ದಿನಗಳಿಂದ ಬೆಳಗಾಂ ಮತ್ತು ಬೆಂಗಳೂರಿನ್ಲಲಿ ರಾಜಕಾರಣಿಗಳ ಮನೆಗಳ ಮೇಲೆ ದಾಳಿ ನಡೆಸಿದ್ದ ೈಟಿ ಅಧಿಕಾರಿಗಳು ನೂರಾರು ಕೋಟಿ ರೂಪಾಯಿ ಹಣ ಮತ್ತು ಕೆಜಿಗಟ್ಟಲೆ ಬಂಗಾರವನ್ನ ವಶಪಡಿಸಿಕೊಂಡಿರುವ ಮಾಹಿತಿ ಇದೀಗ ಬೆಳಕಿಗೆ ಬಂದಿದೆ. ಪ್ರಮುಖವಾಗಿ ಸಣ್ಣ ಕೈಗಾರಿಕಾ ಸಚಿವ ರಮೇಶ್ ಜಾರಕಿಹೊಳಿ ಮನೆಯಲ್ಲಿ ಭಾರೀ ಸಂಪತ್ತು ವಶಪಡಿಸಿಕೊಳ್ಳಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred