ಗುರುಗ್ರಾಮ್, (ಜೂ.23)​: 15 ವರ್ಷ ಬಾಲಕನಿಗೆ ಲೈಂಗಿಕ ಕಿರುಕುಳ ಕೊಟ್ಟು ಆತನನ್ನು ಕೊಲೆ ಮಾಡಿರುವ ಘಟನೆ ಹರಿಯಾಣದ ಗುರುಗ್ರಾಮ್ ನಡೆದಿದೆ.

ಮೃತ ಬಾಲಕ ಗುರುಗ್ರಾಮ್​ನ ನಿವಾಸಿಯಾಗಿದ್ದಾನೆ.  ಲೈಂಗಿಕ ಕಿರುಕುಳ ಕಿರುಕುಳ ನೀಡಿ ಹತ್ಯೆ ಮಾಡಲಾಗಿದೆ ಎಂದು ಮೃತ ಬಾಲಕನ ತಂದೆ ಶನಿವಾರ ಪೊಲೀಸರಿಗೆ ದೂರು ನೀಡಿದ್ದಾರೆ.

ದೂರಿನ ಮೇರೆಗೆ ಮೂವರು ಅಪ್ರಾಪ್ತ ಬಾಲಕರನ್ನು ಪೊಲೀಸರು ಬಂಧಿಸಿದ್ದಾರೆ. ಮೃತ ಬಾಲಕ ಹುಟ್ಟಿದಾಗಿನಿಂದ ಬುದ್ಧಿಮಾಂದ್ಯ ಎನ್ನಲಾಗಿದೆ. 

 ಬುದ್ಧಿಮಾಂದ್ಯ ಮೃತ ಬಾಲಕ ತನ್ನನ್ನು ಮೂವರು ಬಾಲಕರು ಲೈಂಗಿಕವಾಗಿ ಹಿಂಸಿಸಿದ್ದಾರೆ. ನಂತರ ಹೊಡೆದಿದ್ದಾರೆ ಎಂದು ಜೂ.14ರಂದು ಪಾಲಕರ ಬಳಿ ಹೇಳಿಕೊಂಡಿದ್ದ.

 ಅಂದಿನಿಂದಲೇ ಬಾಲಕನಿಗೆ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿದ್ದು, ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ಮೃತಪಟ್ಟಿದ್ದಾನೆ ಎಂದು ಆತನ ತಂದೆ ದೂರು ನೀಡಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಮೃತ ಬಾಲಕನ ತಂದೆಯ ದೂರಿನ ಅನ್ವಯ ಮೂವರು ಬಾಲಕರನ್ನು ಬಂಧಿಸಲಾಗಿದ್ದು, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದಾರೆ.