ಹಾವೇರಿ: ದೇಶದಲ್ಲಿ ಲೈಂಗಿಕ ದೌರ್ಜನ್ಯಗಳು ಹೆಚ್ಚಾಗುತ್ತಿರೋ ಕಾರಣಕ್ಕಾಗಿ ಈ ಪಿಡುಗನ್ನು ಹತ್ತಿಕ್ಕಲು 15 ವರ್ಷದ ಪೋರನೊಬ್ಬ ನೂರಾರು ಕೀಲೋ ಮೀಟರ್ ನಿಂದ ಸೈಕಲ್ ಮೇಲೆ ಸಂಚರಿಸಿ ಜಾಗೃತಿ ಮೂಡಿಸುತ್ತಿದ್ದಾನೆ. ಹೌದು, ಬೆಂಗಳೂರಿನ ಮಹರ್ಷಿ ಸಂಕೇತ್ ಲೈಂಗಿಕ ದೌರ್ಜನ್ಯ ತಡೆಯ ಬಗ್ಗೆ ಜಾಗೃತಿ ಮೂಡಿಸಲು ಸ್ಫಿಕ್ ಔಟ್ ಎಂಬ ಧ್ಯೇಯದೊಂದಿಗೆ ಬೆಂಗಳೂರಿನಿಂದ ಮುಂಬಯಿ ವರೆಗೂ ಸೈಕಲ್ ಸವಾರಿ ಮಾಡ್ತಿದಾನೆ.

"

ಶನಿವಾರ ಹಾವೇರಿಗೆ ಈತನ ಸೈಕಲ್ ಸವಾರಿ ಆಗಮಿಸಿತ್ತು. ಈ ವೇಳೆ ಇಲ್ಲಿನ ಮಹಿಳಾ ಸಮಾಜದ ನಾಗರತ್ನ ಧಾರವಾಡಕರ್ ಸೇರಿದಂತೆ ಶಿಶು ಅಭಿವೃದ್ದಿ ಇಲಾಖೆ, ಮಕ್ಕಳ ಹಕ್ಕುಗಳ ವೇದಿಕೆಯ ಸದಸ್ಯರು ಬರಮಾಡಿಕೊಂಡರು.

ಅಂದಹಾಗೆ ಈ ಪೋರನ ಈ ಮಹತ್ಕಾರ್ಯಕ್ಕೆ ಬಾಲಿವುಡ್ ನ ಖ್ಯಾತ ಕಲಾ ನಿರ್ದೇಶಕ ಸುಖಾಂತ್ ಪಾಣಿಗ್ರಹಿ ಸಾಥ್ ನೀಡಿದ್ದು ವಿಶೇಷ. ಈ ವೇಳೆ ಮಾತನಾಡಿದ ಮಹರ್ಷಿ ಸಂಕೇತ್ ಲೈಂಗಿಕ ದೌರ್ಜನ್ಯ ತಡೆಯಲು ಎಲ್ಲರೂ ಕೈಜೋಡಿಸಬೇಕಿದೆ ಅಂದಿದ್ದಾರೆ.