Asianet Suvarna News Asianet Suvarna News

ವೈದ್ಯ, ಡೆಂಟಲ್‌ ಖಾಸಗಿ ಸೀಟು ಶುಲ್ಕ ಏರಿಕೆ

ವೈದ್ಯ ಮತ್ತು ದಂತ ವೈದ್ಯ ಕಾಲೇಜುಗಳ ಶುಲ್ಕವನ್ನು  ಹೆಚ್ಚಳ ಮಾಡಲು ರಾಜ್ಯ ಸರ್ಕಾರ ನಿರ್ಣಯ ಕೈಗೊಂಡಿದೆ. ಆದರೆ ಸರ್ಕಾರಿ ಕಾಲೇಜುಗಳಲ್ಲಿ ಮಾತ್ರ ಶುಲ್ಕ ಹೆಚ್ಚಳ ಮಾಡದಿರಲು ನಿರ್ಧರಿಸಲಾಗಿದೆ.

15 percent fee hike in PG medical and dental seats in Karnataka
Author
Bengaluru, First Published Jun 21, 2019, 12:02 PM IST

ಬೆಂಗಳೂರು [ಜೂ.21] :  2019-20ನೇ ಸಾಲಿನ ಖಾಸಗಿ ವೈದ್ಯ ಮತ್ತು ದಂತ ವೈದ್ಯ ಕಾಲೇಜುಗಳ ಶುಲ್ಕವನ್ನು ಶೇ.15ರಷ್ಟುಹೆಚ್ಚಳ ಮಾಡಲು ರಾಜ್ಯ ಸರ್ಕಾರ ನಿರ್ಣಯ ಕೈಗೊಂಡಿದೆ. ಸರ್ಕಾರಿ ಕಾಲೇಜುಗಳಿಗೆ ಮಾತ್ರ ಶುಲ್ಕ ಹೆಚ್ಚಳ ಮಾಡದಿರಲು ನಿರ್ಧರಿಸಿದ್ದು, ಹಿಂದಿನ ವರ್ಷದ ಶುಲ್ಕವೇ ಮುಂದುವರಿಯಲಿದೆ. 

ಗುರುವಾರ ಖಾಸಗಿ ಮತ್ತು ಭಾಷಾ ಅಲ್ಪಸಂಖ್ಯಾತ ವೈದ್ಯಕೀಯ ಕಾಲೇಜುಗಳ ಅಸೋಸಿಯೇಷನ್‌ ಜತೆ ನಡೆಸಿದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಖಾಸಗಿ ಕಾಲೇಜುಗಳು ಶೇ.20ರಿಂದ 25ರಷ್ಟುಶುಲ್ಕ ಹೆಚ್ಚಳ ಮಾಡುವಂತೆ ಬೇಡಿಕೆ ಇಟ್ಟಿದ್ದವು. ಅಂತಿಮವಾಗಿ ಶೇ.15ರಷ್ಟುಹೆಚ್ಚಳ ಮಾಡಲು ಒಪ್ಪಿಗೆ ಸೂಚಿಸಲಾಗಿದೆ.

ಕಳೆದ ವರ್ಷ ಶೇ.8ರಷ್ಟುಹಾಗೂ ಈ ವರ್ಷ ಶೇ.15ರಷ್ಟುಸೇರಿ ಕೇವಲ ಎರಡು ವರ್ಷಗಳಲ್ಲಿ ಶೇ.23ರಷ್ಟು ಶುಲ್ಕ ಹೆಚ್ಚಳ ಮಾಡಲಾಗಿದೆ. ಖಾಸಗಿ ಕಾಲೇಜಿನಲ್ಲಿ ಪಡೆಯುವ ಸರ್ಕಾರಿ, ಖಾಸಗಿ ಮತ್ತು ಮ್ಯಾನೇಜ್‌ಮೆಂಟ್‌ ಕೋಟಾ ಸೀಟುಗಳಿಗೆ ಶೇ.15ರಷ್ಟು ಶುಲ್ಕ ಹೆಚ್ಚಳ ಅನ್ವಯವಾಗಲಿದೆ. ಮೂಲ ಸೌಕರ್ಯ ಖರ್ಚು, ಬೋಧನಾ ಸಿಬ್ಬಂದಿ ವೇತನ ಹೆಚ್ಚಳವಾಗಿದೆ. ನೂತನ ತಂತ್ರಜ್ಞಾನ, ಪ್ರಯೋಗಾಲಯದ ಉಪಕರಣಗಳ ಖರೀದಿ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಖರ್ಚಿನ ಮೊತ್ತ ಹೆಚ್ಚಳವಾಗಿರುವುದರಿಂದ ಶುಲ್ಕ ಹೆಚ್ಚಳ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ನೂತನ ಶುಲ್ಕ ವಿವರ:

ಕಳೆದ ವರ್ಷ ಸರ್ಕಾರಿ ಕೋಟಾ ವೈದ್ಯ ಸೀಟಿಗೆ 97,350 ರು. ಮತ್ತು ದಂತ ವೈದ್ಯ ಸೀಟಿಗೆ 63 ಸಾವಿರ ರು. ಶುಲ್ಕವಿತ್ತು. ನೂತನ ಶುಲ್ಕ ಹೆಚ್ಚಳದ ಪ್ರಕಾರ ಸರ್ಕಾರಿ ಕಾಲೇಜಿನಲ್ಲಿ 50 ಸಾವಿರ ರು., ಖಾಸಗಿ ಕಾಲೇಜಿನಲ್ಲಿ ಸರ್ಕಾರಿ ಕೋಟಾ ಸೀಟಿಗೆ 1.11 ಲಕ್ಷ ರು. ಹಾಗೂ ಮ್ಯಾನೇಜ್‌ ಮೆಂಟ್‌ ಕೋಟಾ ಸೀಟಿಗೆ 7.85 ಲಕ್ಷ ರು. ಆಗಲಿದೆ. ದಂತ ವೈದ್ಯಕೀಯ ಸೀಟುಗಳು ಸರ್ಕಾರಿ ಕಾಲೇಜಲ್ಲಿ 40 ಸಾವಿರ, ಖಾಸಗಿ ಕಾಲೇಜಿನ ಸರ್ಕಾರಿ ಕೋಟಾದಡಿ 72,484 ರು. ಮತ್ತು ಮ್ಯಾನೇಜ್‌ಮೆಂಟ್‌ ಕೋಟಾದಡಿ 5.32 ಲಕ್ಷ ರು.ಗಳಾಗಲಿವೆ. ರಾಜ್ಯದ 51 ವೈದ್ಯಕೀಯ ಕಾಲೇಜುಗಳಲ್ಲಿ 7,645 ಮತ್ತು 35 ದಂತ ವೈದ್ಯ ಕಾಲೇಜುಗಳಲ್ಲಿ 2,800 ಸೀಟುಗಳು ದೊರೆಯುವ ಸಾಧ್ಯತೆಗಳಿವೆ. ಈ ವರ್ಷದಿಂದ ನಗರದ ಲೇಡಿ ಕರ್ಜನ್‌ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಆರಂಭವಾಗುತ್ತಿರುವುದರಿಂದ ಹೆಚ್ಚುವರಿಯಾಗಿ 150 ಸೀಟುಗಳು ದೊರೆಯಲಿವೆ.

ಶುಲ್ಕ ವಿವರ (2019-20ನೇ ಸಾಲು) (ರು.ಗಳಲ್ಲಿ)

ಕಾಲೇಜುಗಳು    ಸರ್ಕಾರಿ ಕಾಲೇಜು    ಸರ್ಕಾರಿ ಕೋಟಾ    ಖಾಸಗಿ ಕೋಟಾ    ಮ್ಯಾನೇಜ್‌ಮೆಂಟ್‌ ಕೋಟಾ

ವೈದ್ಯ                 50,000       1,11,952   6,83,100    ,85,565

ದಂತ ವೈದ್ಯ    40,000    72,484    4,63,320    5,32,818

Follow Us:
Download App:
  • android
  • ios