ಪಾಕಿಸ್ತಾನವು ಭಾರತವನ್ನು ಮಣಿಸಿದ ಬಳಿಕ, ಈ ಕೋಮು ಸೂಕ್ಷ್ಮ ಜಿಲ್ಲೆಯ ಮೊಹಾಡ್ ಗ್ರಾಮದಲ್ಲಿ 15 ಜನರು ಪಾಕಿಸ್ತಾನ ಪರ ಘೋಷಣೆ ಕೂಗಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು ಎಂದು ಹೇಳಲಾಗಿದೆ.

ಭೋಪಾಲ್(ಜೂ.20): ಇತ್ತೀಚೆಗೆ ಇಂಗ್ಲೆಂಡ್‌ನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ಫೈನಲ್‌ನಲ್ಲಿ ಪಾಕಿಸ್ತಾನ ಜಯಿಸಿದ ಬಳಿಕ, ಪಾಕ್ ಪರ ಘೋಷಣೆ ಕೂಗಿದರು ಎನ್ನಲಾದ ಬಂಧಿತ 15 ಮಂದಿಯ ವಿರುದ್ಧ ಮಧ್ಯಪ್ರದೇಶದ ಬುರ್ಹಾಪುರ ಜಿಲ್ಲೆಯಲ್ಲಿ ದೇಶದ್ರೋಹ ಪ್ರಕರಣ ದಾಖಲಿಸಲಾಗಿದೆ.

ಪಾಕಿಸ್ತಾನವು ಭಾರತವನ್ನು ಮಣಿಸಿದ ಬಳಿಕ, ಈ ಕೋಮು ಸೂಕ್ಷ್ಮ ಜಿಲ್ಲೆಯ ಮೊಹಾಡ್ ಗ್ರಾಮದಲ್ಲಿ 15 ಜನರು ಪಾಕಿಸ್ತಾನ ಪರ ಘೋಷಣೆ ಕೂಗಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ 20ರಿಂದ 35 ವಯೋಮಿತಿಯೊಳಗಿರುವ 15 ಜನರ ಮೇಲೆ ಸೆಕ್ಷನ್ 120ಬಿ (ಕ್ರಿಮಿನಲ್ ಸಂಚು) ಹಾಗೂ ಸೆಕ್ಷನ್ 124ಎ (ದೇಶದ್ರೋಹ) ಆರೋಪದಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ಮೊಹಾಡ್ ಮುಸ್ಲಿಂ ಪ್ರಾಬಲ್ಯದ ಗ್ರಾಮವಾಗಿದ್ದು, ಹಿಂದು ಗ್ರಾಮಸ್ಥ ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಲಾಗಿದೆ.

ಇದೇ ವೇಳೆ ‘ಎಲ್ಲ ಆಪಾದಿತರಿಗೆ ಸರ್ಕಾರಿ ಸಬ್ಸಿಡಿ ನಿಲ್ಲಿಸುವಂತೆ ಜಿಲ್ಲಾ ಮ್ಯಾಜಿಸ್ಟ್ರೇಟರಿಗೆ ಪತ್ರ ಬರೆಯಲಾಗುವುದು’ ಎಂದು ತನಿಖಾಧಿಕಾರಿ ರಮಾಶ್ರಯ ಯಾದವ್ ಹೇಳಿದ್ದಾರೆ.