ತಲಾ1000 ಕೋಟಿಗೂ ಹೆಚ್ಚು ಬಾಕಿ ಹೊಂದಿರುವ 1462 ಕಟಬಾಕಿ ಖಾತೆಗಳನ್ನು 21 ಸಾರ್ವಜನಿಕ ಸ್ವಾಮ್ಯದ ಬ್ಯಾಂಕುಗಳು ಹೊಂದಿವೆ ಎಂದು ಕೇಂದ್ರ ಹಣಕಾಸು ಸಚಿವಾಲಯದ ಅಂಕಿ-ಅಂಶಗಳು ಹೇಳಿವೆ.

ನವದೆಹಲಿ (ಜ.08): ತಲಾ1000 ಕೋಟಿಗೂ ಹೆಚ್ಚು ಬಾಕಿ ಹೊಂದಿರುವ 1462 ಕಟಬಾಕಿ ಖಾತೆಗಳನ್ನು 21 ಸಾರ್ವಜನಿಕ ಸ್ವಾಮ್ಯದ ಬ್ಯಾಂಕುಗಳು ಹೊಂದಿವೆ ಎಂದು ಕೇಂದ್ರ ಹಣಕಾಸು ಸಚಿವಾಲಯದ ಅಂಕಿ-ಅಂಶಗಳು ಹೇಳಿವೆ. ಈ ಪೈಕಿ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) 265 ಖಾತೆಗಳನ್ನು ಹೊಂದಿದೆ.

ಇವು ತಲಾ 100 ಕೋಟಿ ರು.ಗೂ ಹೆಚ್ಚು ಕಟಬಾಕಿಯನ್ನು ಹೊಂದಿದ್ದು ಒಟ್ಟಾರೆ 77,538 ಕೋಟಿ ರು. ಬ್ಯಾಂಕ್‌ಗೆ ವಾಪಸು ಬರಬೇಕಿದೆ. ಇದು ಸೆಪ್ಟೆಂಬರ್ ಅಂತ್ಯದ ಅಂಕಿ-ಅಂಶವಾಗಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ 143 ಕಟಬಾಕಿ ಖಾತೆಗಳನ್ನು ಹೊಂದಿದ್ದು 45,973 ಕೋಟಿ ರು. ಬರಬೇಕು.