ಬೆಂಗಳೂರು(ಸೆ.13): ನಗರದಲ್ಲಿ ಕಾವೇರಿ ಗಲಭೆ ಉದ್ವಿಗ್ನಗೊಂಡಿರುವ ಹಿನ್ನೆಲೆಯಲ್ಲಿ ರಾಜಗೋಪಾಲನಗರ, ಸುಂಕದಕಟ್ಟೆ, ಬ್ಯಾಟರಾಯನಪುರ, ವಿಜಯನಗರ, ಲಗ್ಗೆರೆ, ಪೀಣ್ಯ, ಆರ್ಎಂಸಿ ಯಾರ್ಡ್, ಕೆಂಗೇರಿ,ರಾಜಾಜಿನಗರ, ಮೈಸೂರು ರೋಡ್, ಮಾಗಡಿ ರೋಡ್​​ ಸೇರಿದಂತೆ 16 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕರ್ಫ್ಯೂ ಜಾರಿ ಜಾರಿಗೊಳಿಸಲಾಗಿದೆ.

ಹೆಗ್ಗನಹಳ್ಳಿಯ ಮುಖ್ಯರಸ್ತೆಯಲ್ಲಿ ಪೊಲೀಸ್​ ಫೈರಿಂಗ್​ನಲ್ಲಿ ಗಾಯಗೊಂಡಿದ್ದ ಉಮೇಶ್​​(25) ಸಾವನಪ್ಪಿದ್ದ ಹಿನ್ನೆಲೆಯಲ್ಲಿ ನಗರದ ಹಲವು ಕಡೆ ಪೊಲೀಸ್ ಬಿಗಿಭದ್ರತೆ ಜಾರಿಗೊಳಿಸಲಾಗಿದೆ. ಮೃತಪಟ್ಟ ಉಮೇಶ್ ತುಮಕೂರು ಮೂಲದವನಾಗಿದ್ದು, ಒಂದೂವರೆ ವರ್ಷದ ಹೆಣ್ಣುಮಗುವಿದೆ.